More

    ಸೇವೆ ಗುರುತಿಸಿ ಸರ್ಕಾರಿ ಸೌಲಭ್ಯ ಕಲ್ಪಿಸಿ: ವಿವಿಧ ಸಫಾಯಿ ಕರ್ಮಚಾರಿಗಳ ಒತ್ತಾಯ

    ಕುಷ್ಟಗಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಸಫಾಯಿ ಕರ್ಮಚಾರಿಗಳನ್ನು ಗುರುತಿಸಿ ಸರ್ಕಾರಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ವಿಮುಕ್ತ ದೇವದಾಸಿ ವೇದಿಕೆ ಸಂಚಾಲಕ ಚಂದಾಲಿಂಗ ಕಲಾಲಬಂಡಿ ನೇತೃತ್ವದಲ್ಲಿ ವಿವಿಧ ಸಫಾಯಿ ಕರ್ಮಚಾರಿಗಳು ತಹಸೀಲ್ದಾರ್ ಎಂ.ಸಿದ್ದೇಶಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಸಫಾಯಿ ಕರ್ಮಚಾರಿಗಳು ಆರೋಗ್ಯದ ಪರಿವೆ ಇಲ್ಲದೆ ಶೌಚಗೃಹ, ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸರ್ಕಾರ, ಅಧಿಕಾರಿಗಳು ಅವರ ಸೇವೆ ಗುರುತಿಸುತ್ತಿಲ್ಲ. ಕೆಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವರು ಜೀವಂತ ಇರುವಾಗಲೇ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು. ಕೂಡಲೇ ಅಂಥವರನ್ನು ಗುರುತಿಸಿ ಗುರುತಿನ ಚೀಟಿ ನೀಡಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಸಫಾಯಿ ಕರ್ಮಚಾರಿಗಳಾದ ಸಿದ್ದಪ್ಪ ಕಂದಕೂರು, ಶ್ರೀಕಾಂತ ಕುಷ್ಟಗಿ, ಹನುಮಪ್ಪ ಬಿಜಕಲ್, ದುರುಗಪ್ಪ, ಸುಖಮುನಿ, ಬಸಪ್ಪ, ದುರುಗಮ್ಮ, ಬಸಮ್ಮ, ಕಂದಕೂರಪ್ಪ, ದಾವಲ್‌ಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts