More

    ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲು

    ಕುಷ್ಟಗಿ: ಕೊಪ್ಪಳ ಏತ ನೀರಾವರಿ ಯೋಜನೆಯಡಿ ತಾಲೂಕಿನ ವಿವಿಧ ಕೆರೆ ತುಂಬಿಸಲು ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಪೂರೈಕೆಯಾಗುವ ನೀರು ಮುದುಟಗಿ ಗ್ರಾಮದ ಬಳಿ ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ಪೋಲಾಗಿದೆ.

    ಪೋಲಾದ ನೀರಿನಿಂದ ಸುತ್ತಲಿನ ಜಮೀನುಗಳು ಜಲಾವೃತಗೊಂಡಿವೆ. ಜತೆಗೆ ಮಣ್ಣಿನ ಸವಕಳಿಯೂ ಆಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಹೆಚ್ಚಾದ ನೀರು ಸಮೀಪದ ಹಳ್ಳ ಸೇರಿ ಬಾಗಲಕೋಟೆ ಜಿಲ್ಲೆಯ ಇಳಕಲ್‌ವರೆಗೆ ಹರಿದಿದೆ. ಸ್ಥಳಕ್ಕೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಭೇಟಿ ನೀಡಿ ಪರಿಶೀಲಿಸಿದ್ದು, ಕಳಪೆ ಕಾಮಗಾರಿಯೇ ಪೈಪ್ ಒಡೆಯಲು ಕಾರಣ ಎಂದು ಆರೋಪಿಸಿದ್ದಾರೆ.

    ಕೆರೆ ತುಂಬಿಸುವ ಯೋಜನೆಗೆ ಪೂರೈಕೆಯಾಗುವ ನೀರು ಇಳಕಲ್ ತಾಲೂಕಿನ ಬಲಕುಂದಿಯಲ್ಲಿರುವ ಸಂಗ್ರಹಣಾ ತೊಟ್ಟಿ(ಜಾಕ್‌ವೆಲ್)ಯಲ್ಲಿ ಮೊದಲು ಸಂಗ್ರಹವಾಗುತ್ತದೆ. ತಿಂಗಳ ಹಿಂದೆಯಷ್ಟೇ ಮೊದಲ ಬಾರಿ ನೀರು ಸಂಗ್ರಹಗೊಂಡು ಈ ಭಾಗದ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದರು. ಅದಾದ ನಂತರ ಮಂಗಳವಾರ ತಾಲೂಕಿನ ಕಲಾಲಬಂಡಿಯಲ್ಲಿರುವ 26.57 ಲಕ್ಷ ಲೀಟರ್ ಸಾಮರ್ಥ್ಯದ ಸಂಗ್ರಹಣಾ ತೊಟ್ಟಿಗೆ ಮೊದಲ ಬಾರಿ ನೀರು ಪೂರೈಕೆಯಾಗಿ ಈ ಭಾಗದ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಇದರ ಬೆನ್ನಲ್ಲಿಯೇ ಸಂಗ್ರಹಣಾ ತೊಟ್ಟಿಗೆ ಪೂರೈಕೆಯಾಗುವ ನೀರು ಮಾರ್ಗಮಧ್ಯೆ ಪೈಪ್ ಒಡೆದು ಪೋಲಾಗಿರುವುದು ಸುತ್ತಲಿನ ಜಮೀನುಗಳ ರೈತರಲ್ಲಿ ಆತಂಕವನ್ನುಂಟು ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts