More

    ಕುಷ್ಟಗಿ ಮೇಲ್ಸೇತುವೆಗೆ ಪುಂಡಲೀಕಪ್ಪ ಜ್ಞಾನಮೋಟೆ ನಾಮಕರಣ ಸೂಕ್ತ ಎಂದ ಡಿಸಿಎಂ ಗೋವಿಂದ ಕಾರಜೋಳ

    ಕುಷ್ಟಗಿ: ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ಪುಂಡಲೀಕಪ್ಪ ಜ್ಞಾನಮೋಟೆ ಅವರ ಹೆಸರನ್ನು ಮೇಲ್ಸೇತುವೆಗೆ (ಫ್ಲೈಓವರ್) ನಾಮಕರಣ ಮಾಡಿದ್ದು, ಸೂಕ್ತವಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಫ್ಲೈಓವರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ವಿವಿಧ ಕಟ್ಟಡ, ವೃತ್ತಗಳಿಗೆ ಮಹನೀಯರ ಹೆಸರಿಡುವುದರಿಂದ ಅವರನ್ನು ನಿತ್ಯ ಸ್ಮರಿಸಿದಂತಾಗುತ್ತದೆ. ಫ್ಲೈಓವರ್ ನಿರ್ಮಾಣ ಈ ಭಾಗದ ಬಹುದಿನದ ಬೇಡಿಕೆಯಾಗಿತ್ತು. 2016ರರಲ್ಲಿ ನಿತಿನ್ ಗಡ್ಕರಿ 68.6ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದರು. ಫ್ಲೈಓವರ್ ನಿರ್ಮಾಣದ ನಂತರ ರಸ್ತೆ ಅಪಘಾತಗಳು ಕಡಿಮೆ ಆಗಲಿವೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮ ಅನುಸರಿಸುವ ಮೂಲಕ ತೊಲಗಿಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು. ಸಂಸದ ಸಂಗಣ್ಣ ಕರಡಿ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿದರು. ಮಾಜಿ ಶಾಸಕರಾದ ಕೆ.ಶರಣಪ್ಪ, ದೊಡ್ಡನಗೌಡ ಪಾಟೀಲ್, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ತಹಸೀಲ್ದಾರ್ ಎಂ.ಸಿದ್ದೇಶ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಜಿಪಂ ಸದಸ್ಯ ಕೆ.ಮಹೇಶ, ಗಂಗಾವತಿ ಸಿಪಿಐ ಸುರೇಶ ತಳವಾರ, ಕುಷ್ಟಗಿ ಸಿಪಿಐ ಜಿ.ಚಂದ್ರಶೇಖರ, ಪ್ರಭಾರ ಪಿಎಸ್‌ಐ ಹೀರಪ್ಪ ನಾಯಕ್, ಹನುಮಸಾಗರ ಪಿಎಸ್‌ಐ ಅಮರೇಶ ಹುಬ್ಬಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts