More

    ಮಾರ್ಗಸೂಚಿ ಅನ್ವಯ ಗಣೇಶ ಹಬ್ಬ ಆಚರಣೆಗೆ ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಸೂಚನೆ

    ಕುರುಗೋಡು: ಹಬ್ಬಗಳ ಆಚರಣೆ ಅದ್ದೂರಿಗಿಂತ ಭಕ್ತಿ ಬಹಳ ಮುಖ್ಯ ಎಂದು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಅಭಿಪ್ರಾಯ ಪಟ್ಟರು. ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗಣೇಶ ಚತುರ್ಥಿ ಹಬ್ಬದ ಆಚರಣೆಯ ಶಾಂತಿಸಭೆಯಲ್ಲಿ ಮಾತನಾಡಿದರು. ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿ ಅನ್ವಯ ಗಣೇಶ ಹಬ್ಬವನ್ನು ಆಚರಿಸಬೇಕು ಹಾಗೂ ಗಣೇಶ ವಿಗ್ರಹಗಳನ್ನು ಸಾರ್ವಜನಿಕವಾಗಿ ಕೂಡಿಸುವವರು ಕರೊನಾ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ. ಪಿಒಪಿ ಗಣೇಶ ವಿಗ್ರಹಗಳಿಗೆ ಸರ್ಕಾರ ನಿರ್ಬಂಧ ವಿಧಿಸಿದ್ದು, ಸ್ಥಳೀಯ ಆಡಳಿತ, ಜೆಸ್ಕಾಂ ಸಂಸ್ಥೆ, ಪೊಲೀಸ್ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು.

    ಸಿಪಿಐ ಚಂದನ್‌ಗೋಪಾಲ್ ಮಾತನಾಡಿ, ಕೋವಿಡ್ ಸೋಂಕು ಸಂಪೂರ್ಣವಾಗಿ ನಮ್ಮಿಂದ ನಿರ್ಮೂಲನೆಗೊಂಡಿಲ್ಲ, ಹೀಗಾಗಿ ಎಲ್ಲಾರೂ ಒಗ್ಗೂಡಿ ಗ್ರಾಮಕ್ಕೊಂದು ಗಣೇಶ ವಿಗ್ರಹ ಪ್ರತಿಷ್ಠಾಪಿಸಿದರೆ ಒಳಿತು. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ಪ್ರಮುಖರಾದ ಕೆ.ಎಂ.ಉಮಾಪತಿಗೌಡ, ಎಸ್‌ಟಿಎಂ ಸದಾಶಿವಯ್ಯ, ಸರ್ನಾಡ್ ನಟರಾಜಗೌಡ, ಅಂದ್ರಾಳು ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts