More

    ಆಟೋಟಗಳಿಂದ ಉತ್ತಮ ಆರೋಗ್ಯ

    ಕುಂದಗೋಳ: ಮಕ್ಕಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಆಸಕ್ತಿ ಕಡಿಮೆಯಾಗುತ್ತಿದೆ. ಓದು ಎಷ್ಟು ಮುಖ್ಯವೋ ಪಠ್ಯೇತರ ಚಟವಟಿಕೆಗಳು ಕೂಡ ಅಷ್ಟೇ ಮುಖ್ಯ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯದ ಜತೆಗೆ ಬುದ್ಧಿಮಟ್ಟ ವೃದ್ಧಿಯಾಗುತ್ತದೆ ಎಂದು ಶಿಕ್ಷಣ ಸಮಿತಿ ಅಧ್ಯಕ್ಷ ಟಿ.ಎಸ್. ಗೌಡಪ್ಪನವರ ಹೇಳಿದರು.
    ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜ್ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಖೋಖೋ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಡಿಡಿಪಿಯು ಕೆ.ಪಿ. ಸುರೇಶ ಮಾತನಾಡಿ, ಮಕ್ಕಳು ಆಟೋಟಗಳಲ್ಲಿ ಭಾಗವಹಿಸಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಿವೆ ಎಂದರು.
    ಶಿಕ್ಷಣ ಸಮಿತಿ ಚೇರ್ಮನ್ ಅರವಿಂದ ಕಟಗಿ ಮಾತನಾಡಿ, ಖೋಖೋ ದೇಶದ ಗ್ರಾಮೀಣ ಕ್ರೀಡೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿತ್ತು. ಆದರೆ, ಯುವಪೀಳಿಗೆಯಲ್ಲಿ ಕ್ರೀಡಾ ಮನೋಭಾವ ಕಡಿಮೆಯಾಗಿದ್ದರಿಂದ ಖೋಖೋ, ಕಬಡ್ಡಿ, ವಾಲಿಬಾಾಲ್ ಆಟಕ್ಕೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
    ಕೆಪಿಸಿಸಿ ಕೋ ಆರ್ಡಿನೇಟರ್ ಶರಣಪ್ಪ ಕೊಟಗಿ, ಸುರೇಶ ಸವಣೂರು ಮಾತನಾಡಿದರು. ಕ್ರೀಡಾಕೂಟದಲ್ಲಿ 8 ಬಾಲಕಿಯರ, 8 ಬಾಲಕರ ಒಟ್ಟು 16 ತಂಡಗಳು ಭಾಗವಹಿಸಿದ್ದವು.
    ಜಿಲ್ಲಾ ಕ್ರೀಡಾ ಸಂಯೋಜಕ ಅಧಿಕಾರಿ ಯು.ಎನ್. ಹಜಾರಿ, ಆರ್.ಎಂ. ಪಟೇಲ್, ಆರ್.ಐ. ಬ್ಯಾಹಟ್ಟಿ, ಶೇಖಣ್ಣ ಬಾಳಿಕಾಯಿ, ಜಿ.ಎ. ಪೂಜಾರಿ, ಭರಮಣ್ಣ ಸೊರಟೂರ, ವೀರೇಶ ಗೌಡಪ್ಪನವರ, ಶ್ರೀಕಾಂತ ಕಲಾಲ, ಎಸ್.ಜಿ. ಅವಾರಿ, ರಾಜು ಶಿವಳ್ಳಿ, ಇದ್ದರು. ಪ್ರಾಚಾರ್ಯ ಎಲ್.ಎಲ್. ಲಮಾಣಿ, ಶಿಕ್ಷಕ ಎಚ್.ಟಿ. ದೊಡಮನಿ, ಬಿ.ಡಿ. ಕಲಾರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts