More

    ಪೌರ ಕಾರ್ಮಿಕರಿಗೆ ಕೆಲಸದ ಹೊರೆ: ನೇಮಕವಾದವರು ಕಚೇರಿ ಕೆಲಸಕ್ಕೆ ರಜೆಯಿದ್ದರೂ ನಡೆಯುತ್ತದೆ ಸ್ಯಾಲರಿ, ಸವಲತ್ತು

    ಕುಂದಾಪುರ: 700 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕ ಇರಬೇಕು ಎನ್ನುವ ಸರ್ಕಾರಿ ಆದೇಶದಂತೆ ಹಾಲಿ 22 ಪೌರ ಕಾರ್ಮಿಕರನ್ನು ಸೇರಿಸಿ, ನೇರ ನೇಮಕಾತಿಯಲ್ಲಿ 10, ನೇರ ಪಾವತಿಯಲ್ಲಿ 14 ಸೇರಿ 46 ಪೌರ ಕಾರ್ಮಿಕರು ಕುಂದಾಪುರ ಪುರಸಭೆಯಲ್ಲಿ ದುಡಿಯುತ್ತಿದ್ದಾರೆ.
    2022ರ ಜನಗಣತಿ ಪ್ರಕಾರ ಪುರಸಭೆಗೆ ಹೆಚ್ಚುವರಿ ಹುದ್ದೆ ಬೇಕಿದ್ದು, ಈಗಿರುವ ಕಾರ್ಮಿಕರಿಗೆ ಕಸ ವಿಲೇವಾರಿ ಒತ್ತಡ ಜಾಸ್ತಿಯಾಗುತ್ತಿದೆ. ಅನಾರೋಗ್ಯ ಹಾಗೂ ಇನ್ನಿತರ ಕಾರಣದಿಂದ ಸ್ವಚ್ಛತೆ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರ ಸಂಖ್ಯೆ ಇಳಿಕೆ ಆಗುತ್ತಿದೆ.

    ಕುಂದಾಪುರ ಪುರಸಭೆಯ 46 ಪೌರ ಕಾರ್ಮಿಕರಲ್ಲಿ ನಿವೃತ್ತ 5, ಮುಂಬಡ್ತಿ ಪಡೆದು ವರ್ಗಾವಣೆ 2, ಶಾಶ್ವತ ರಜೆಯಲ್ಲಿ ಇದ್ದವರು 4, ಕಚೇರಿ ಕೆಲಸ ನಿರ್ವಹಿಸುವವರು 9 ಮಂದಿ. ಸ್ವಚ್ಛತೆ ಕೆಲಸ ಮಾಡುವವರ ಸಂಖ್ಯೆ 25ಕ್ಕೆ ಇಳಿದಿದೆ. ಗುತ್ತಿಗೆ ಪದ್ಧತಿಯಲ್ಲಿ 13 ಜನರಲ್ಲಿ ಸ್ವಚ್ಛತೆ ಕೆಲಸದವರು 10 ಹಾಗೂ ಇತ್ತೀಚಿಗೆ ಕಂದಾವರ ಡಂಪಿಂಗ್ ಯಾರ್ಡ್‌ಗೆ ಹೊಸದಾಗಿ 9 ಜನರು ಸ್ವಚ್ಛತೆ ಕೆಲಸಕ್ಕೆ ಗುತ್ತಿಗೆ ಪದ್ಧತಿಯಲ್ಲಿ ನೇಮಕ ಆಗಿದ್ದು, ಅವರಲ್ಲಿ 8 ಸೇರಿ ಒಟ್ಟು 68 ಪೌರ ಕಾರ್ಮಿಕರಲ್ಲಿ ಸ್ವಚ್ಛತೆ ಕೆಲಸದ ಜವಾಬ್ದಾರಿ 46 ಮಂದಿಗೆ ಮಾತ್ರ ಇದೆ. ಇದಲ್ಲದೆ ಅನಾರೋಗ್ಯ, ಇತರ ಕಾರಣದಿಂದ ಗೈರಾದರೆ ಕಾರ್ಮಿಕರ ಸಂಖ್ಯೆ ಮತ್ತಷ್ಟು ಕಡಿಮೆ ಆಗುತ್ತದೆ. ಒಟ್ಟಾರೆ ಪುರಸಭೆ ಪೌರ ಕಾರ್ಮಿಕರ ಕೆಲಸ ಒತ್ತಡ, ಅರ್ಧಕ್ಕೆ ನಿಂತ ಪೌರ ಕಾರ್ಮಿಕರ ಮನೆಗಳು ನೆಮ್ಮದಿ ಕಿತ್ತುಕೊಂಡಿದ್ದು, ಪೌರ ಕಾರ್ಮಿಕರ ಕೋಟದಲ್ಲಿ ನೇಮಕವಾದ ಕಾರ್ಮಿಕರನ್ನು ಕಚೇರಿ ಕೆಲಸಕ್ಕೆ ನೇಮಕ ಮಾಡುವ ಮೂಲಕ ಪುರಸಭೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ.

    ಪ್ರಮುಖ ಅಂಶ: ಕುಂದಾಪುರ ಪುರಸಭೆಯಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿರುವ ಹಿರಿಯ ನೌಕರರಿಗೆ ಅನಾರೋಗ್ಯ ಇದ್ದರೂ ರಜೆ ಸಿಗುತ್ತಿಲ್ಲ. ಸ್ವಚ್ಛತೆ ಕೆಲಸವನ್ನು ಒಂದು ಸಮುದಾಯ ಮಾತ್ರ ನಿರ್ವಹಿಸುತ್ತಿದೆ. ವಸತಿ ಯೋಜನೆ ಹಣ ಪಡೆಯುವುದರಲ್ಲಿ ಕುಂದಾಪುರ ಪುರಸಭೆಗೆ ಪ್ರಶಸ್ತಿ ಬಂದಿದೆ. ಪೌರ ಕಾರ್ಮಿಕರ ಕುಟುಂಬಸ್ಥರಿಗೆ 2017-2018 ಸಾಲಿನಲ್ಲಿ ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ 14 ಮನೆಗಳು ಮಂಜೂರಾಗಿದ್ದು ಅದರಲ್ಲಿ 4 ಮನೆ 2019ರಲ್ಲಿ ಪೂರ್ಣಗೊಂಡಿದೆ. ಜಿಪಿಎಸ್ ಆಗಿದ್ದು, 2 ಹಂತದ ಹಣ ಬಾಕಿ ಇದೆ.

    ಅಧ್ಯಕ್ಷರಿಗೆ ತಾರತಮ್ಯ ದೂರು: 2011ರ ಜನಸಂಖ್ಯೆಯಂತೆ ಕುಂದಾಪುರ ಪುರಸಭೆಯ ಒಟ್ಟು ಜನ ಸಂಖ್ಯೆ 30444. ಕುಂದಾಪುರ ನಗರದಲ್ಲಿ ಪ್ರತಿ ದಿನ 13 ರಿಂದ 14 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಅದರಲ್ಲಿ 4 ಟನ್ ಹಸಿಕಸ ಇದ್ದರೆ, 1 ಟನ್ ಪೇಪರ್ ರಟ್ಟಿನ ಡಬ್ಬಗಳು ಬರುತ್ತವೆ. ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ನದ್ದು ಸಿಂಹಪಾಲು. ತ್ಯಾಜ್ಯ ಸಾಗಾಟಕ್ಕೆ 12 ವಾಹನವಿದ್ದು, ಕುಂದಾಪುರ ನಗರದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಕಂದಾವರ ಡಂಪಿಂಗ್ ಯಾರ್ಡ್‌ಗೆ ಡಂಪ್ ಮಾಡಬೇಕಿದೆ. ಅಲ್ಲಿ ಯಂತ್ರಗಳ ಮೂಲಕ ತ್ಯಾಜ್ಯ ವಿಂಗಡಣೆ ಮಾಡಿ, ಸಾವಯವ ಗೊಬ್ಬರ ಸಿದ್ಧಪಡಿಸಲಾಗುತ್ತದೆ. ಈ ಗೊಬ್ಬರಕ್ಕೆ ಡಿಮ್ಯಾಂಡ್ ಇದ್ದು, ರೈತರು ವಿಕ್ರಯಿಸುತ್ತಿದ್ದಾರೆ. ಪೌರ ಕಾರ್ಮಿಕರ ಕೋಟದಲ್ಲಿ ನೇಮಕವಾದ 6 ಪೌರ ಕಾರ್ಮಿಕರು ಕಚೇರಿ ಕೆಲಸಕ್ಕೆ ನಿಯುಕ್ತವಾಗಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರದವರನ್ನು ಕಚೇರಿ ಕೆಲಸಕ್ಕೆ ನೇಮಕ ಮಾಡಿ ಅವರಿಗೆ ಎಲ್ಲಾ ಸವಲತ್ತು ನೀಡುತ್ತಿದ್ದು, ಕೊರಗರನ್ನು ಮಾತ್ರ ಕ್ಲೀನಿಂಗ್ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪೌರ ಕಾರ್ಮಿಕ ಸಂಘಟನೆ ಪುರಸಭೆ ಅಧ್ಯಕ್ಷರಿಗೆ ದೂರು ನೀಡಿದೆ.

    ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕ ಮಹಿಳೆ ಡೆಪ್ಯುಟೇಶನ್ ಆಗಿದ್ದು, ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಬಳ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ನೀಡುತ್ತಿದೆ. ಪುರಸಭೆಗೆ ನೇರ ನೇಮಕಾತಿಗೆ ಅವಕಾಶವಿಲ್ಲ, ಏಜೆನ್ಸಿ ಮೂಲಕ ತಾತ್ಕಾಲಿಕ ನೇಮಕವಿದ್ದು, ಎಸ್ಟಿ ಸಮುದಾಯದ ಎಂಎಸ್‌ಡಬ್ಲುೃ ಆದ ಯುವತಿಯ ನೇಮಕ ನಮ್ಮ ಮಟ್ಟದಲ್ಲಿ ಆಗುವುದಿಲ್ಲ. ನೇಮಕವಾದ ಎಲ್ಲರಿಗೂ ಅವರ ಹಕ್ಕಿನ ಎಲ್ಲ ಸವಲತ್ತು ನೀಡುತ್ತಿದ್ದು, ರಜಾದಿನದಲ್ಲೂ ಪೌರಕಾರ್ಮಿಕ ಕೋಟದಲ್ಲಿ ನೇಮಕವಾದವರೂ ಕಚೇರಿ ಕೆಲಸ ಮಾಡುತ್ತಾರೆ.
    -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ

    ಪುರಸಭೆಯ ಪೌರಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚುತ್ತಿದ್ದು, ಪೌರ ಕಾರ್ಮಿಕರ ಕೋಟದಲ್ಲಿ ನೇಮಕವಾದವರನ್ನು ಕಚೇರಿ ಕೆಲಸಕ್ಕೆ ಬಳಸಿಕೊಳ್ಳುವ ಮೂಲಕ ಒತ್ತಡ ಮತ್ತಷ್ಟು ಹೆಚ್ಚಿಸಿದೆ. ಪೌರ ಕಾರ್ಮಿಕರ ಮನೆಗಳು ಅನುದಾನ ಕೊರತೆಯಿಂದ ಪೂರ್ತಿ ಆಗಿಲ್ಲ. ನಮ್ಮದೇ ಕಮ್ಯುನಿಟಿಯ ಎಂಎಸ್‌ಡಬ್ಲುೃ ಆದ ಯುವತಿಗೆ ಪುರಸಭೆ ಕೆಲಸ ನೀಡದೆ ಬೇರೆ ಸಮುದಾಯದವರಿಗೆ ಕೆಲಸ ನೀಡಿದೆ. ಪೌರ ಕಾರ್ಮಿಕ ಕೋಟದಲ್ಲಿ ನೇಮಕವಾದ ಬೇರೆ ಕಮ್ಯುನಿಟಿಯವರಿಗೆ ಕಚೇರಿ ಕೆಲಸ ನೀಡಿ ಕೊರಗರನ್ನು ಮಾತ್ರ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.
    -ನಾಗರಾಜ, ಪೌರ ಕಾರ್ಮಿಕ, ಪುರಸಭೆ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts