More

    ಕೆಸರಿನ ಮಧ್ಯೆ ಕುಂದಗೋಳ ತಹಸೀಲ್ದಾರ್ ಕಚೇರಿ

    ಕುಂದಗೋಳ: ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣ ಕೆಸರುಗದ್ದೆಯಂತಾಗಿದೆ. ಇದರಿಂದ ಕಚೇರಿಗೆ ಕೆಲಸ ಕಾರ್ಯ ನಿಮಿತ್ತ ಬಂದು ಹೋಗುವವರು ಪರದಾಡುವಂತಾಗಿದೆ. ಆವರಣವೆಲ್ಲ ಅರಲುಮಯವಾಗಿದ್ದು, ಇದು ತಹಸೀಲ್ದಾರರ ಕಚೇರಿಯೋ… ಕೆಸರಿನಗದ್ದೆಯೋ? ಎಂದು ಜನ ಗೇಲಿ ಮಾಡುತ್ತಿದ್ದಾರೆ.

    ನೋಂದಣಿ ಮತ್ತು ಮುದ್ರಣ ಇಲಾಖೆ, ಉಪ ಖಜಾನೆ ಕಾರ್ಯಾಲಯ, ದೃಢೀಕರಣ ನಕಲು ವಿತರಣಾ ವಿಭಾಗ, ಭೂಮಾಪನಾ ವಿಭಾಗ ಹಾಗೂ ಕಂದಾಯ ಹಾಗೂ ಇತರ ಇಲಾಖೆಗಳ ಕಚೇರಿಗಳು ತಹಸೀಲ್ದಾರ್ ಕಾರ್ಯಾಲಯದಲ್ಲಿವೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಂದ ನಿತ್ಯ ನೂರಾರು ಜನ ಕೆಲಸ, ಕಾರ್ಯಗಳಿಗಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸಾರ್ವಜನಿಕರಿಗೆ ಸರಿಯಾದ ಆಸನಗಳಿಲ್ಲ. ಶೌಚಗೃಹ ವ್ಯವಸ್ಥೆಯೂ ಇಲ್ಲಿಲ್ಲ. ಮಳೆಗಾಲವಾದ್ದರಿಂದ ಕಾರ್ಯಾಲಯದ ಆವರಣದಲ್ಲಿನ ತಗ್ಗು-ಗುಂಡಿಗಳಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಟ್ಟಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ತೊಂದರೆಯಾಗಿದೆ. ವಾಹನಗಳಿಗೆ ರ್ಪಾಂಗ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.

    ಕಚೇರಿ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದರಿಂದ ವಿಷ ಜಂತುಗಳ ಆಶ್ರಯತಾಣವಾಗಿದೆ. ಇಲಿ-ಹೆಗ್ಗಣ, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ.

    ಇತ್ತೀಚೆಗೆಷ್ಟೇ ನೂತನ ಶಾಸಕ ಎಂ.ಆರ್. ಪಾಟೀಲ ಅವರು ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸರಿಪಡಿಸುವಂತೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಗಮನ ಹರಿಸುತ್ತಿಲ್ಲ.

    ಶಾಸಕರ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಅಧಿಕಾರಿಗಳು ವರ್ಗಾವಣೆಯಾಗಿದ್ದಾರೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ಸ್ವಲ್ಪ ತಡವಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಹೊಸ ಅಧಿಕಾರಿ ಬಂದ ತಕ್ಷಣ ಹಂತ ಹಂತವಾಗಿ ಎಲ್ಲ ಕೆಲಸಗಳನ್ನು ನಿರ್ವಹಿಸಲಾಗುವುದು.

    | ಎಸ್. ಎಸ್. ಪರಮಾನಂದ

    ತಹಸೀಲ್ದಾರ್ ಕುಂದಗೋಳ

    ಬೆನಕನಹಳ್ಳಿ ಗ್ರಾಮದಿಂದ ತಹಸೀಲ್ದಾರ್ ಕಚೇರಿಗೆ ಜಮೀನಿನ ಉತ್ತಾರ ತೆಗೆದುಕೊಳ್ಳಲು ಬಂದಿದ್ದೆ. ಮಳೆಗಾಲದಲ್ಲಿ ಅವ್ಯವಸ್ಥೆಯಿಂದ ಕೂಡಿದ ಆವರಣದಲ್ಲಿ ನಡೆದು ಹೋಗುವುದು ಸಮಸ್ಯೆ ಎನಿಸುತ್ತಿದೆ.

    | ಪ್ರದೀಪ ಮೇಳಮಾಳಗಿ

    ಪ್ರಗತಿಪರ ರೈತ, ಬೆನಕನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts