More

    ಹಾಸನದ ಕೆಲ ಶಕುನಿಗಳು ನಮ್ಮವರ ತಲೆ ಕೆಡಿಸುತ್ತಿದ್ದಾರೆ: ಎ​ಚ್​ಡಿಕೆ

    ಬಳ್ಳಾರಿ: ದೇವಗೌಡರ ಕುಟುಂಬಕ್ಕೆ ಶಕುನಿಗಳ ಕಾಟ ಇದೆ ಎನ್ನುವ ಮಾತು ಮಾಜಿ ಸಿಎಂ ಎ​ಚ್​ಡಿಕೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ, “ಹಾಸನ ಗೊಂದಲ ಬೇರೆ, ಅದಕ್ಕೆ ಎರಡನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಇಲ್ಲ. ಹಾಸನ ಟಿಕೇಟ್ ಇನ್ನು ಫೈನಲ್ ಆಗಿಲ್ಲ” ಎಂದು ಹೇಳಿದ್ದು ಪರೊಕ್ಷವಾಗಿ ಭವಾನಿ ರೇವಣ್ಣಗೆ ಟಿಕೇಟ್ ಇಲ್ಲ ಅಂತಾ ಪರೊಕ್ಷವಾಗಿ ಬಳ್ಳಾರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಇದನ್ನೂ ಓದಿ: ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್​ಡಿಕೆ ಕೊಟ್ಟ ಕಾರಣ ಹೇಗಿದೆ..

    ಬಳ್ಳಾರಿಯಲ್ಲಿ ಮಾತನಾಡಿದ ಮಾಜಿ ಸಿಎಂ, “ಹಾಸನದ ಟಿಕೆಟ್ ಕಾರ್ಯಕರ್ತರ ಭಾವನೆಯಲ್ಲಿ ತೀರ್ಮಾನ ಆಗಬೇಕು ಎನ್ನುತ್ತಿರುವೆ. ನಾನು ಒಂದೂವರೆ ವರ್ಷದ ಹಿಂದೆ ಹೇಳಿರುವೆ. ಹಾಸನದ ಬಿಜೆಪಿ ಅಭ್ಯರ್ಥಿ ಸೋಲಿಸಲು ನಮ್ಮ ಕುಟುಂಬದ ಅಭ್ಯರ್ಥಿ ಬೇಕಿಲ್ಲ ಅಂತಾ ಹೇಳಿದ್ದೆ. ನಮ್ಮ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಸೋಲಿಸಬೆಕು ಎಂದಿದ್ದೆ. ಶಕುನಿಗಳಿಂದ ಟಿಕೆಟ್ ಹಂಚಿಕೆ ವಿಳಂಬವಾಗಿದೆ. ಮನೆ ಹಾಳು ಮಾಡುವ ಶಕುನಿಗಳು ಹಾಸನದಲ್ಲಿ ಇದ್ದರೆ. ಆ ಶಕುನಿಗಳು ನಮ್ಮವರ ತೆಲೆ ಕೆಡಿಸುತಿದ್ದಾರೆ” ಎಂದರು.

    ಕುರುಕ್ಷೇತ್ರದಲ್ಲಿ ಯುದ್ದ ಯಾಕೆ ಆಯಿತು? ಎ​ಚ್​ಡಿಕೆ ವಿವರಣೆ ಹೀಗಿದೆ… 

    ಇದೇ ಸಂದರ್ಭ ಕುರುಕ್ಷೇತ್ರ ಯುದ್ಧದ ಬಗ್ಗೆಯೂ ಮಾತನಾಡಿದ್ದು” ಶಕುನಿಗಳು ನಡವಳಿಕೆಯಿಂದಲೇ ಯುದ್ದವಾಯಿತು. ಈ ದೇಶದ ಮಣ್ಣಿನಲ್ಲಿ ಶಕುನಿ ಆಟ ನಡೆದುಕೊಂಡು ಬಂದಿದ್ದಾರೆ. ಶಕುನಿಗಳು ನಮ್ಮ ಕುಟುಂಬದಲ್ಲಿ ಇಲ್ಲ. ಹಾಸನದಲ್ಲಿ ಕೆಲ ಶಕುನಿಗಳು ಇದ್ದಾರೆ, ಅವರು ನಮ್ಮವರ ತಲೆ ಕೆಡಿಸುತಿದ್ದಾರೆ. ಬೆಳಿಗ್ಗೆಯಿಂದ ಕುಳಿತು ನಮ್ಮವರ ಬ್ರೇನ್ ವಾಶ್ ಮಾಡ್ತಿದ್ದಾರೆ. ನಮ್ಮ ಪಕ್ಷದಲ್ಲಿ ಶಕುನಿಗಳು ಇಲ್ಲ, ಆದ್ರೆ ಕೆಲವರ ಅಭಿಮಾನಿಗಳು ಇದ್ದಾರೆ(ರೆವಣ್ಣ ಅಭಿಮಾನಿಗಳು).

    ಬುದ್ದಿ ಜೀವಿಗಳು, ಹಿತ ಶತ್ರುಗಳು ಇದ್ದರೆ, ಅವರು ತಲೆ ಕೆಡಿಸುತಿದ್ದಾರೆ. ಹಾಸನ ಟಿಕೆಟ್ ವಿಚಾರದಲ್ಲಿ ಈವರೆಗೂ ರೇವಣ್ಣ ಮಾತನಾಡಿಲ್ಲ. ರೇವಣ್ಣ ಅವರಿಗೆ ಈ ವಿಷಯದಲ್ಲಿ ಮಾತನಾಡುಲು ಭಯ ಕಾಡುತ್ತಿದ್ದೆ. ನಾ ಏನು ಅವರ ಜತೆಯಲ್ಲಿ ಕದ್ದು ಮುಚ್ಚಿ ಮಾತನಾಡಲ್ಲ. ರೇವಣ್ಣ ಅವರು ಹಾಸನ ಟಿಕೆಟ್ ವಿಚಾರದಲ್ಲಿ ಟಿಕೆಟ್ ಯಾಕೆ ಕೊಡಬೇಕು ಅಂತಾ ಮನವರಿಕೆ ಮಾಡಬೇಕು. ಹೀಗಾಗಿ ಮಾತನಾಡಲು ಅವರಿಗೆ ಭಯ ಕಾಡುತ್ತಿದ್ದೆ.‌‌ ನನ್ನ ನಿಲುವು ನೂರು ಸಾರಿ ಹೇಳಿರುವೆ. ಹಾಸನ ಟಿಕೇಟ್ ವಿಚಾರದಲ್ಲಿ ನನ್ನ ನಿಲುವು ಬದಲಾಗಲ್ಲ. ಕಳೆದ ನಾಲ್ಕು ತಿಂಗಳಿಂದ ಕೆಲಸ ಮಾಡಿರುವೆ.

    ಇದನ್ನೂ ಓದಿ: ಊರಿಗೆ ನೀರು ಪೂರೈಸೋ ಟ್ಯಾಂಕ್‌ನಲ್ಲಿ ಮಹಿಳೆಯ ಕೊಳೆತ ಶವ: ಜನರು ಕಂಗಾಲು!

    ಈ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರೆಲು ಕೆಲಸ ಮಾಡುತ್ತಿರುವೆ. ಆದ್ರೆ ಇದಕ್ಕೆ ಕೆಲವರು ಅಡ್ಡಗಾಲು ಹಾಕುತಿದ್ದಾರೆ. ಅವರಿಗೆ ದೇವರು ಬುದ್ದಿ ಕೊಡಬೇಕು. ಹಾಸನ ಟಿಕೇಟ್ ವಿಚಾರವನ್ನು ದೊಡ್ಡದು ಮಾಡಿ ನನ್ನ ಕಟ್ಟಿಹಾಕಲು ಮುಂದಾಗಿದ್ದಾರೆ. ನಾ ಹದಿನೈದು ವರ್ಷಗಳ ಕಾಲ ನಾನು ಎಲ್ಲವನ್ನೂ ನುಂಗಿಕೊಂಡು ಬಂದಿರುವೆ. ಮುಂದೆ ಆಗುವ ಅನಾಹುತಗಳ ಬಗ್ಗೆ ನನಗೆ ಅರಿವಿದೆ. ದೇವಗೌಡರಿಗೂ ರೇವಣ್ಣ ಅವರನ್ನು ಕನ್ವೆನ್ಸ್ ಮಾಡುವ ಶಕ್ತಿ ಇಲ್ಲ. ಅದು ನಮ್ಮ ದುರ್ದೈವ. ಜೆಡಿಎಸ್ ಎರಡನೇ ಪಟ್ಟಿ ನಾಡಿದ್ದು ಬಿಡುಗಡೆ ಮಾಡಲಾಗುತ್ತಿದೆ. ಇಂದು 42 ಜನರ ಪಟ್ಟಿ ಫೈನಲ್ ಮಾಡಿರುವೆ” ಎಂದಿದ್ದಾರೆ. ಹೀಗೆ ಜೆಡಿಸ್​ ಕುಟುಂಬದ ಒಳಗೆಯೇ ಇರುವ ಭಿನ್ನಮತ ಹೊರಬಿದ್ದಿದೆ ಎಂದೇ ಹೇಳಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts