More

    ದಕ್ಷಿಣ ಭಾರತೀಯರು ಹಿಂದುಗಳು ಅಲ್ಲ, ನಾವೆಲ್ಲರೂ ದ್ರಾವಿಡರು : ಸಾಹಿತಿ ಕುಂ. ವೀರಭದ್ರಪ್ಪ

    ಮೈಸೂರು: ದಕ್ಷಿಣ ಭಾರತದವರು ಯಾರು ಸಹ ಹಿಂದುಗಳು ಅಲ್ಲ, ನಾವೆಲ್ಲರೂ ದ್ರಾವಿಡರು. ಲಿಂಗಾಯತ ಧರ್ಮವೇ ನನ್ನ ಧರ್ಮ ಎಂದು ಸಾಹಿತಿ ಕುಂ. ವೀರಭದ್ರಪ್ಪ ಅಭಿಪ್ರಾಯಪಟ್ಟರು.

    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕ ವತಿಯಿಂದ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಶನಿವಾರ ಅಥಣಿಯ ಶ್ರೀ ಮೋಟಗಿ ಮಠಾಧ್ಯಕ್ಷ ಶ್ರೀ ಪ್ರಭು ಚನ್ನಬಸವಸ್ವಾಮೀಜಿ ರಚನೆಯ ‘ಮಹಾತ್ಮರ ಚರಿತಾಮೃತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

    ಬಸವಣ್ಣ ನನ್ನ ದೇವರು. ಹಾಗಾಗಿ ಜೈ ಬಸವೇಶ ಅಂತ ಹೇಳುತ್ತೇನೆ, ಜೈ ಶ್ರೀರಾಮ್ ಎಂದು ಹೇಳುವುದಿಲ್ಲ. ಲಿಂಗಾಯತ ಶರಣ ಸಾಹಿತ್ಯವೇ ನನ್ನ ಸಂವಿಧಾನ. ಮನುಶಾಸ್ತ್ರದ ವಿರುದ್ಧ ಸೃಷ್ಟಿಯಾದ ಕ್ರಾಂತಿಕಾರ ಸಾಹಿತ್ಯವೇ ವಚನ ಸಾಹಿತ್ಯ. ಕನ್ನಡ ಸಾಹಿತ್ಯಕ್ಕೆ ಹೊಸ ತಿರುವು ನೀಡಿದ ಸಾಹಿತ್ಯ ಇದು. ಹಾಗಾಗಿ ಎಲ್ಲರೂ ಶರಣ ಸಾಹಿತ್ಯವನ್ನು ಓದಬೇಕು ಎಂದು ಕರೆ ನೀಡಿದರು.

    ಬಸವಣ್ಣ ಅವರನ್ನು ಪುನರುತ್ಥಾನ ಮಾಡದೆ ಹೋದರೆ, ಅವರ ವಚನ ಸಾಹಿತ್ಯ ಜನಪ್ರತಿಯಗೊಳಸದೆ ಹೋದರೆ ಈ ಸಮಾಜಕ್ಕೆ ಉಳಿಗಾಲವಿಲ್ಲ. ಬಸವಣ್ಣ ನಮಗೆ ಅತ್ಯಂತ ಮುಖ್ಯವಾದವರು. ಮಠಗಳು ಇಲ್ಲದೆ ಹೋಗಿದ್ದರೆ ನಾವು ಇಷ್ಟೊಂದು ಎತ್ತರಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕೆಲ್ಲ ಬಸವಣ್ಣ ಅವರು ಕಾರಣ. ಹೀಗಾಗಿ ಬಸವಣ್ಣ ನಮ್ಮೆಲ್ಲರ ಸಾರ್ವಕಾಲಿಕ ಪ್ರಧಾನಿ. ಹಿಂದುತ್ವದ ಪ್ರತಿಪಾದಕರಾದ ಪ್ರಮೋದ್ ಮುತಾಲಿಕ್, ಪ್ರವೀಣ್ ತೊಗಾಡಿಯ ಅಂಥಹವರಿಗೆ ಬಸವಣ್ಣ ಅವರನ್ನು ಪರಿಚಯಿಸುವ ಕಾರ್ಯ ಆಗಬೇಕು. ಬಸವಣ್ಣ ಅವರಿಂದ ಅವರು ಪ್ರಭಾವಿತರಾಗಬೇಕು. ಅವರಿಂದ ಜೈ ಬಸವಣ್ಣ ಎಂದು ಹೇಳಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts