More

    ಕುಲವಳ್ಳಿ ರೈತರ ಪ್ರತಿಭಟನೆ ವಾಪಸ್

    ಚನ್ನಮ್ಮನ ಕಿತ್ತೂರು: ಸಾಗುವಳಿ ಭೂಮಿ ಹಕ್ಕು ಪತ್ರ ವಿತರಿಸುವಂತೆ ಆಗ್ರಹಿಸಿ ಇಲ್ಲಿಯ ತಹಸೀಲ್ದಾರ್ ಕಚೇರಿ ಎದುರು ಕುಲವಳ್ಳಿ ಭಾಗದ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬುಧವಾರ ಭೇಟಿ ನೀಡಿ ರೈತರ ಮನವೊಲಿಸಲು ಯಶಸ್ವಿಯಾದರು.

    ಸತೀಶ ಜಾರಕಿಹೊಳಿ ಮಾತನಾಡಿ, ಈಗಾಗಲೇ ಸುಪ್ರೀಂಕೋರ್ಟ್ ಖಾಸಗಿ ಮಾಲೀಕರ ಪರ ಷರತ್ತುಬದ್ಧ ಆದೇಶ ನೀಡಿದೆ. ಈ ಆದೇಶದಲ್ಲಿ ಅರಣ್ಯ ಸಂರಕ್ಷಿಸುವಂತೆ ಸೂಚಿಸಿದೆ. ಯಾರೊಬ್ಬರೂ ಗೊಂದಲಕ್ಕೊಳಗಾಗಬಾರದು. ಸರ್ಕಾರದ ಗಮನ ಸೆಳೆಯಲು ನೀವು ಪ್ರತಿಭಟನೆ ಮಾಡುತ್ತಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದರು.

    ಇಲ್ಲಿಯ ರೈತರು ನೀವು ಅನ್ಯಾಯವಾಗಿದೆ ಎಂದು ಹೇಳುತ್ತಿದ್ದೀರಿ, ಈ ಕುರಿತು ಮತ್ತೊಂದು ಬಾರಿ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗುವುದು.ಈ ಹಿಂದೆ ನಡೆದ ಸಮೀಕ್ಷೆಯಲ್ಲಿ ಹಲವಾರು ಗೊಂದಲಗಳಿವೆ. ಅದನ್ನು ನಿವಾರಿಸಲು ಬಡವರ ಪರ ಹಾಗೂ ರೈತರ ಪರವಾಗಿರಲು ನಮ್ಮ ಸರ್ಕಾರ ಬದ್ಧವಾಗಿದೆ. ಯಾರೇ ಬಂದು ನಿಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದರೂ ಪೊಲೀಸ್ ಇಲಾಖೆ ಸಹಾಯ ಪಡೆದುಕೊಳ್ಳಿ. ಕಾನೂನು ಹೋರಾಟಕ್ಕೆ ಅವಕಾಶವಿದ್ದು, ಹಕ್ಕು ಕೇಳಲು ಸಹ ಅವಕಾಶವಿದೆ ಎಂದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು. ಶಾಸಕ ಬಾಬಾಸಾಹೇಬ ಪಾಟೀಲ, ಎಸಿ ಪ್ರಭಾವತಿ ಕೀರಪುರ, ತಹಸೀಲ್ದಾರ್ ರವೀಂದ್ರ ಹಾದಿಮನಿ, ರೈತ ಹೊರಾಟಗಾರ ಬಿಷ್ಠಪ್ಪ ಶಿಂಧೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts