More

  ಕುಲವಳ್ಳಿ ರೈತರನ್ನು ದಾರಿತಪ್ಪಿಸುವ ಹುನ್ನಾರ

  ಚನ್ನಮ್ಮನ ಕಿತ್ತೂರು: ರೈತರನ್ನು ದಾರಿ ತಪ್ಪಿಸಿ ಭೂಮಿ ಸಿಗದಂತೆ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ. ಆದರೆ, ನಾನು ಎಂದೆಂದಿಗೂ ರೈತರಪರ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

  ಪಟ್ಟಣದ ಕೋಟೆ ಆವರಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಮೀನು ಮೊದಲು ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಇಲಾಖೆ ಆಧೀನದಲ್ಲಿತ್ತು. ಆಗ ಸರ್ಕಾರದ ವಿರುದ್ಧ ಏನೇ ಮಾಡಿದರೂ ನಡೆಯುತ್ತಿತ್ತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಮೀನು ಖಾಸಗಿ ಮಾಲೀಕರ ಅಧೀನದಲ್ಲಿದೆ. ಆದೇಶದ ವಿರುದ್ಧವಾಗಿ ಕೋರ್ಟ್‌ಗೆ ಹೋಗಬೇಕು. ಇಲ್ಲ ರಾಜೀ- ಸಂಧಾನದ ಮೂಲಕ ಸರಿ ಮಾಡಬೇಕು. ಆದರೆ, ಕೆಲ ರಾಜಕಾರಣಿಗಳು ಮುಗ್ಧ ರೈತರ ದಾರಿ ತಪ್ಪಿಸಿ ಜಮೀನು ಸಿಗದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

  ಕಾಂಗ್ರೆಸ್ ಮುಖಂಡ ರಾಜಾಸಲೀಂ ಕಾಸೀಂನವರ ಮಾತನಾಡಿ, ಬಾಬಾಸಾಹೇಬಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಓರ್ವ ಮಹಿಳೆ ವಿರುದ್ಧ ದೂರು ನೀಡಲು ಅಭಿಮಾನಿಗಳು ನಿರ್ಣಯ ಮಾಡಲಾಗಿತ್ತು. ಆದರೆ, ಶಾಸಕರು ತಡೆದಿದ್ದಾರೆ. ಮಾಜಿ ಶಾಸಕರು ಅಧಿಕಾರ ಕಳೆದುಕೊಂಡು ರೈತರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ದೂರಿದರು.
  ಪಪಂ ಸದಸ್ಯ ಎಂ.ಎ್.ಜಕಾತಿ, ಕಿತ್ತೂರು ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕೀರಪ್ಪ ಸಕ್ರೆನ್ನವರ, ಚನ್ನಗೌಡ ಪಾಟೀಲ, ಸಿದ್ದರಾಮ ಮಾರಿಹಾಳ, ಮುದುಕಪ್ಪ ಮರಡಿ, ಚಂದ್ರಗೌಡ ಪಾಟೀಲ, ಸುನೀಲ ಗಿವಾರಿ, ಕೃಷ್ಣ ಬಾಳೆಕುಂದ್ರಿ, ಸಾಗರ ದೇಸಾಯಿ, ಬಸವರಾಜ ಸಂಗೊಳ್ಳಿ, ರಮೇಶ ಮೊಕಾಶಿ, ಕಾಶೀನಾಥ ಕಿನಾರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts