More

    ಮೊಸಳೆ ಸೆರೆಗೆ ಆಗ್ರಹ

    ಕುಳಗೇರಿಕ್ರಾಸ್: ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಮಲಪ್ರಭಾ ನದಿಯಲ್ಲಿ ಶನಿವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ನದಿ ತೀರದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

    ಸುದ್ದಿ ತಿಳಿದ ಮರುದಿನದಿಂದ ಮೊಸಳೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರೂ ಸಮರ್ಪಕವಾಗಿ ಕಾರ್ಯ ಮಾಡುತ್ತಿಲ್ಲ. ಅಲ್ಲಲ್ಲಿ ಎಚ್ಚರಿಕೆ ಬ್ಯಾನರ್‌ಗಳನ್ನು ಕಟ್ಟಿ ನದಿ ದಡದಲ್ಲಿ ಕಾಯುತ್ತ ಕುಳಿದ್ದಾರೆ. ನದಿಯಲ್ಲಿ ಆಳವಾದ ಉಸುಕಿನ ಕಂದರ ಹಾಗೂ ಮುಳ್ಳುಕಂಟಿ ಇದ್ದು ದಡದಲ್ಲಿ ಹೀಗೆಯೇ ಕಾಯುತ್ತ ಕುಳಿತರೆ ಮೊಸಳೆ ಸೆರೆ ಹಿಡಿಯಲಾಗದು. ನದಿಯಾಚೆಯ ಜಮೀನುಗಳಿಗೆ ರೈತರು ಕೆಲಸಕ್ಕೆ ಹೋಗಲು, ದನಕರುಗಳಿಗೆ ನೀರು ಕುಡಿಸುವುದು, ಮೈತೊಳೆಯುವುದು ಕಷ್ಟಕರವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಧುನಿಕ ಯಂತ್ರೋಪಕರಣ ಬಳಸಿ ಆದಷ್ಟು ಬೇಗನೆ ಮೊಸಳೆ ಸೆರೆ ಹಿಡಿದು ಜನರ ಭಯ ದೂರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಆಳವಾದ ನೀರು ಮತ್ತು ಸುತ್ತಲೂ ಯಾದಿ ಬಳ್ಳಿ, ಮುಳ್ಳುಕಂಟಿ ಇರುವುದರಿಂದ ಮೊಸಳೆ ಹಿಡಿಯುವುದು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ.
    ಆರ್.ಬಿ. ಗಂಗಾಪುರ, ಅರಣ್ಯರಕ್ಷಕ, ಸುಳ್ಳ ಗ್ರಾಮ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts