More

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆದಾಯ 123 ಕೋಟಿ ರೂ.; ಸತತ 12ನೇ ವರ್ಷವೂ ನಂ.1 ಪಟ್ಟ ಸಾಧ್ಯತೆ

    ಸುಬ್ರಹ್ಮಣ್ಯ: ನಾಡಿನ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ 123.64 ಕೋಟಿ ರೂ. (1,23,64,49,480.47 ರೂ.) ಆದಾಯ ಗಳಿಸಿದೆ.

    ಇದರಲ್ಲಿ 63,77,41,589.55 ರೂ. ಖರ್ಚಾಗಿದ್ದು, 59,87,07,890 ರೂ. ಉಳಿತಾಯವಿದೆ. 2021-2022ನೇ ಸಾಲಿನಲ್ಲಿ 72,73,75,807 ರೂ. ಆದಾಯ ಬಂದಿದ್ದು, ಈ ಬಾರಿಯದ್ದು 51 ಕೋಟಿ ರೂ. ಅಧಿಕವೆಂದು ದಾಖಲಾಗಿದೆ.

    ಇದನ್ನೂ ಓದಿ: ದೇಶದ ಅತಿದೊಡ್ಡ ಸುರಂಗಮಾರ್ಗ ಜೊಜಿಲಾ; ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಚಾರಕ್ಕೆ ತಯಾರಿ ಜೋರು

    11 ವರ್ಷಗಳಿಂದ ಆದಾಯ ಗಳಿಕೆಯಲ್ಲಿ ನಂಬರ್​ 1

    ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಇದೇ ಮೊದಲ ಬಾರಿಗೆ ಕ್ಷೇತ್ರವು ಆದಾಯದಲ್ಲಿ 100 ಕೋಟಿ ರೂ. ದಾಟಿದೆ. ಕಳೆದ 11 ವರ್ಷಗಳಿಂದ ಆದಾಯ ಗಳಿಕೆಯಲ್ಲಿ ನಿರಂತರ ನಂಬರ್​ 1 ಸ್ಥಾನದಲ್ಲಿರುವ ದೇವಸ್ಥಾನ ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ.

    ಗುತ್ತಿಗೆ 1,20,37,057 ರೂ, ತೋಟ 15,66,001 ರೂ, ಕಟ್ಟಡ ಬಾಡಿಗೆ 1,20,87,512 ರೂ, ಕಾಣಿಕೆ 6,25,99,323 ರೂ, ಕಾಣಿಕೆ ಹುಂಡಿ 29,12,73,854 ರೂ, ಹರಕೆ ಸೇವೆ 53,89,19,033 ರೂ, ಅನುದಾನ 3,05,341 ರೂ., ಹೂಡಿಕೆ ಬಡ್ಡಿ 16,16,24,305 ರೂ, ಸಂಕೀರ್ಣ ಜಮೆಗಳಿಂದ 7,48,74,889 ರೂ, ಅನ್ನಸಂತರ್ಪಣೆ ನಿಧಿ 7,24,05,587 ರೂ., ಅಭಿವೃದ್ಧಿ ನಿಧಿ 8,56,526 ರೂ, ಶಾಶ್ವತ ಸೇವಾ ಮೂಲಧನ 78,99,950 ರೂ. ಆದಾಯ ಬಂದಿದೆ.

    ಇದನ್ನೂ ಓದಿ: ಕಾಳ ಸಂತೆಯಲ್ಲಿ ಮಾರಾಟವಾಗುತ್ತಿವೆ ಟಿಕೆಟ್! ಐಪಿಎಲ್ ಟಿಕೆಟ್ ಹಗರಣ ಎಂದು ಕಿಡಿಕಾರಿದ ಫ್ಯಾನ್ಸ್

    ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಹೆಚ್ಚಳ

    ದೇವಸ್ಥಾನದ ಆದಾಯವು 2006-07ರಲ್ಲಿ 19.76 ಕೋಟಿ ರೂ. ಇತ್ತು. 2007-08ರಲ್ಲಿ 24.44 ಕೋಟಿ ರೂ.ಗೆ ಏರಿ, ರಾಜ್ಯದ ಶ್ರೀಮಂತ ದೇವಾಲಯವಾಗಿ ಪರಿಗಣಿತವಾಯಿತು. 2008-09ರಲ್ಲಿ 31 ಕೋಟಿ, 2009-10ರಲ್ಲಿ 38.51 ಕೋಟಿ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77.60 ಕೋಟಿ, 2015-16ರಲ್ಲಿ 88.83 ಕೋಟಿ, 2016-17ರಲ್ಲಿ 89.65 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92.09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 72.73 ಕೋಟಿ ರೂ. ಆದಾಯ ಗಳಿಸಿತ್ತು.

    ಇದನ್ನೂ ಓದಿ: ಬಂಗಾಳದ ಕಾರ್ಮಿಕನಿಗೆ ಕೇರಳದಲ್ಲಿ ಒಲಿಯಿತು ಅದೃಷ್ಟ; ಲಾಟರಿಯಲ್ಲಿ ಹಣ ಗೆಲ್ಲುತ್ತಿದ್ದಂತೆ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts