More

    ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ

    ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರದ ದರ್ಬಾರು ಮಂಟಪದಲ್ಲಿ ನಡೆದ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ಸರ್ವ ಅಲಂಕೃತ ವಿಗ್ರಹ ಪ್ರತಿಷ್ಠಾಪನೆಗೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

    ಚಂದ್ರಶೇಖರ್ ಸುವರ್ಣ ಮೂಲ್ಕಿ ನೇತೃತ್ವದ ತಂಡ ಅಚ್ಚುಕಟ್ಟು, ಆಕರ್ಷಣೀಯವಾಗಿ ರಚಿಸಿರುವ ದರ್ಬಾರು ಮಂಟಪಕ್ಕೆ ಬೆಳಗ್ಗೆ ೧೨.೧೫ಕ್ಕೆ ಶಾರದಾ ಮಾತೆಯನ್ನು ಕರೆತರಲಾಯಿತು. ಮಹಾಗಣಪತಿ ಬಳಿಕ ಆದಿಶಕ್ತಿಯೊಂದಿಗೆ ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ, ಶ್ರೀಶಾರದಾ ಮಾತೆಯ ಪ್ರತಿಷ್ಠಾಪನೆ, ಪೂಜೆ ನೆರವೇರಿತು.
    ಕೋವಿಡ್ ವಾರಿಯರ್, ಎನ್‌ಆರ್‌ಐ ೆರಂ ಮಾಜಿ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ದೀಪ ಬೆಳಗಿಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಟ್ರಸ್ಟಿಗಳಾದ ರವಿಶಂಕರ್ ಮಿಜಾರು, ಕೆ.ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ಹರೀಶ್ ಕುಮಾರ್, ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಬಿ.ಜಿ.ಸುವರ್ಣ, ಶೇಖರ್ ಪೂಜಾರಿ, ರಾಧಾಕೃಷ್ಣ, ಪಾಲಿಕೆ ಸದಸ್ಯ ಅನಿಲ್ ಕುಮಾರ್ ಉಪಸ್ಥಿತರಿದ್ದರು.

    ಸುಯೋಗ ಎಂದ ಡಾ.ಆರತಿಕೃಷ್ಣ: ಕೋವಿಡ್ ಸಂದರ್ಭ ನಾನು ಸಲ್ಲಿಸಿರುವ ಸೇವೆ ಗುರುತಿಸಿ ನಮ್ಮ ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಮತ್ತು ದೇವಸ್ಥಾನ ಆಡಳಿತ ಮಂಡಳಿ ಉದ್ಘಾಟನೆಯ ಅವಕಾಶ ನೀಡಿದೆ. ಕೋವಿಡ್ ಸಂದರ್ಭ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೊರೊನಾ ವಾರಿಯರ್ಸ್‌ಗೆ ಹೆಚ್ಚು ನೆರವಾಗಿದ್ದೆ. ಅವರ ಪ್ರಾರ್ಥನಾ ಲದಿಂದ ಈ ಅವಕಾಶ ಸಿಕ್ಕಿದೆ. ಇದು ನನ್ನ ಸುಯೋಗ. ಕುದ್ರೋಳಿ ಕ್ಷೇತ್ರದ ಭಕ್ತೆಯಾಗಿರುವ ನನಗೆ ದೊರೆತಿರುವ ಈ ಅವಕಾಶ ಧನ್ಯತೆಯ ಭಾವ ಮೂಡಿಸಿದೆ ಎಂದು ಎನ್‌ಆರ್‌ಐ ೆರಂ ಮಾಜಿ ಉಪಾಧ್ಯಕ್ಷೆ ಡಾ. ಆರತಿಕೃಷ್ಣ ಹೇಳಿದರು. ಕೋವಿಡ್ ಸಂಕಷ್ಟದ ಮಧ್ಯೆಯೂ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕುದ್ರೋಳಿ ಕ್ಷೇತ್ರದಲ್ಲಿ ಆಚರಿಸುತ್ತಿರುವ ಮಂಗಳೂರು ದಸರಾ ಕುದ್ರೋಳಿ ಕ್ಷೇತ್ರದಲ್ಲಿ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಹಲವಾರು ಕ್ರಾಂತಿಕಾರಿ ಹೆಜ್ಜೆಗಳನ್ನು ಇಡಲಾಗಿದೆ. ಅದರಿಂದ ಕುದ್ರೋಳಿ ಕ್ಷೇತ್ರ ದೇಶವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅಮೆರಿಕ ರಾಯಭಾರಿಯಾಗಿದ್ದಾಗದ ಅವಧಿಯಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ನೆನಪಿಸಿಕೊಂಡರು.

    ಮುನ್ನೆಚ್ಚರಿಕೆ ಕ್ರಮ: ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ದೊಡ್ಡ ಸಂಖ್ಯೆಯ ಭಕ್ತರ ಆರೋಗ್ಯ ಪಾಲನೆ ಉದ್ದೇಶದಿಂದ ಕ್ಷೇತ್ರದ ಆಡಳಿತ ಮಂಡಳಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಹೆಲ್ಮೆಟ್ ಮಾದರಿಯ ಮುಖಗವಚ ಧರಿಸಿದ ಕಾರ್ಯಕರ್ತರು ಭಕ್ತರ ದಟ್ಟನೆ ನಿಯಂತ್ರಿಸಲು ಶ್ರಮಿಸಿದರು. ಕ್ಷೇತ್ರದ ಹೆಚ್ಚಿನ ಪ್ರದೇಶಗಳಿಗೆ ಸೀಮಿತ ಸಂಖ್ಯೆಯ ಜನರಿಗಷ್ಟೇ ಪ್ರವೇಶ ಅವಕಾಶ ಒದಗಿಸಲಾಗಿತ್ತು. ಮಧ್ಯಾಹ್ನ ೧೨.೩೦ಕ್ಕೆ ಕ್ಷೇತ್ರದಲ್ಲಿರುವ ದೇವರಿಗೆ ಮಹಾಪೂಜೆ ಬಳಿಕ ಭಕ್ತರಿಗೆ ಅನ್ನಪ್ರಸಾದ ಪೊಟ್ಟಣ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts