More

    ಕೈಗೊಳ್ಳುವ ಕಾರ್ಯಗಳಿಗೆ ಫಲಾಪೇಕ್ಷೆ ಸಲ್ಲ, ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಆಶೀರ್ವಚನ

    ಕೂಡ್ಲಿಗಿ: ಪರೋಪಕಾರದಿಂದ ಆತ್ಮತೃಪ್ತಿ ಲಭಿಸುತ್ತದೆ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಸ್ನೇಹಿತರ ಬಳಗ, ಬೆಂಗಳೂರಿನ ಭಗವಾನ್ ಮಹಾವೀರ ಜೈನ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಸೀಳು ತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ, ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

    ಮಾನವ ಜನ್ಮ ನಮಗೆ ದೊರಕಿದ್ದು ಹಿಂದಿನ ಜನ್ಮದ ಪುಣ್ಯಫಲ. ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿನಂತೆ ಜೀವನದಲ್ಲಿ ಸ್ವಲ್ಪವಾದರೂ ಪರರಿಗೆ ನೀಡುವ ಮಹಾಗುಣ ಬೆಳೆಸಿಕೊಂಡಿರಬೇಕು. ನಾವು ಈ ಜಗತ್ತಿಗೆ ಏನು ನೀಡುತ್ತ್ತೇವೆಯೋ ಅದನ್ನೇ ಮತ್ತೆ ಪಡೆಯುತ್ತೇವೆ. ಅಂದರೆ ಅದು ಪ್ರೀತಿ, ಅನುಕಂಪ, ಸಹಾಯಹಸ್ತ ಅಥವಾ ಏನೇ ಆಗಿರಬಹುದು. ಮಾಡುವ ಕಾರ್ಯಗಳಿಗೆ ಪ್ರತಿಫಲಾಪೇಕ್ಷೆ ಇರಬಾರದು. ನಿರೀಕ್ಷೆ ನಮ್ಮನ್ನು ಕೊರಗುವಂತೆ ಮಾಡುತ್ತದೆ. ಅದು ಜೀವನದಲ್ಲಿ ದುಃಖ ತರುತ್ತದೆ ಎಂದರು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಎನ್.ಎಂ. ನಬಿ ಮಾತಾನಾಡಿ, ಯಾವುದೇ ಸಾರ್ಥಕ ಕೆಲಸಗಳಿಗೆ ಭಗವಂತ ಯಾವಾಗಲೂ ಬೆನ್ನಿಗೆ ನಿಂತು ಸಹಾಯ ಮಾಡುತ್ತಾನೆ. ಯುವ ಸಮುದಾಯ ಇಂತಹ ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವುದು ಶ್ಲಾಘನೀಯ ಕಾರ್ಯ ಎಂದರು.

    ತಾಲೂಕಿನ ವೀರ ಯೋಧ ಶಕೀಲ್ ಭಾಷಾ ಹಾಗೂ ಗುಂಡುಮುಣುಗು ಗ್ರಾಮದ ವಿಕಲಚೇತನೆ ಲಕ್ಷ್ಮೀದೇವಿಗೆ ಸನ್ಮಾನ ಮಾಡಲಾಯಿತು. ಭಗವಾನ್ ಮಹಾವೀರ ಜೈನ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸಜಿತ್, ಡಾ. ಸೃಷ್ಟಿ, ಡಾ. ಮನೋಹರ್, ಸಾರ್ವಜನಿಕ ಆಸ್ಪತ್ರೆಯ ಡಾ. ಮಧು, ಸ್ನೇಹಿತರ ಬಳಗದ ಅಬ್ದುಲ್ ರೆಹಮಾನ್, ಜಬ್ಬಾರ್, ಹೊನ್ನುರು ಬಾಷಾ, ಕೃಷ್ಣ, ಬೂರಾನ್, ಅಲ್ತಮಷ್, ಇದಾಯಿತ್, ಜಿಲಾನ್, ಮಹೇಶ್, ಫಯಾಜ್, ಪ್ರಕಾಶ್ ಆಚಾರ್, ಅಬ್ದುಲ್ ಶಾಹೀದ್ ಇದ್ದರು. ಶಿಬಿರದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ 29 ಮಕ್ಕಳ ತಪಾಸಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts