More

    ಆರ್‌ಒ ಪ್ಲಾಂಟ್‌ಗಳ ದುರಸ್ತಿಗೆ ಮುಂದಾದ ಪಪಂ ಆಡಳಿತ

    ಕೂಡ್ಲಿಗಿ: ಪಪಂ ವ್ಯಾಪ್ತಿಯ 18 ಆರ್‌ಒ ಪ್ಲಾಂಟ್‌ಗಳಿಗೆ ಸಿಬ್ಬಂದಿಯೊಂದಿಗೆ ಶನಿವಾರ ತೆರಳಿದ ಮುಖ್ಯಾಧಿಕಾರಿ ಫಿರೋಜ್ ಖಾನ್, ಅವುಗಳ ನಿರ್ವಹಣೆ ಕುರಿತು ಪಟ್ಟಿಮಾಡಿ, ಕ್ರಮಕ್ಕೆ ಮುಂದಾದರು. ಘಟಕಗಳ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆ ಎಲ್ಲ ಘಟಕಗಳ ನೀರನ್ನು ಸ್ಯಾಂಪಲ್ ಪಡೆದು ಟಿಡಿಎಸ್ ಯಂತ್ರದಿಂದ ಪರೀಕ್ಷೆ ಮಾಡಿ ಮಾಡಿದರು.

    ‘ಕೂಡ್ಲಿಗಿಯಲ್ಲಿ ಕುಡಿಯುವ ನೀರೇ ಸಿಗುತ್ತಿಲ್ಲ’ ಎನ್ನುವ ಶೀರ್ಷಿಕೆ ಅಡಿ ಫೆ.10 ರಂದು ವಿಜಯವಾಣಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಟಿಡಿಎಸ್ ವರದಿಯಲ್ಲಿ ಎಲ್ಲ ಪ್ಲಾಂಟ್‌ಗಳ ನೀರು ಕುಡಿಯಲು ಯೋಗ್ಯವಾಗಿದೆ ಎಂಬುದು ಸಮಾಧಾನ ತಂದಿದೆ. ಎಲ್ಲ ಪ್ಲಾಂಟ್‌ಗಳ ಮೆಂಮೇರಿನ್ (ಶುದ್ಧೀಕರಿಸುವ ಕಿಟ್) ಬಳಕೆಗೆ ಯೋಗ್ಯವಾಗಿದ್ದು, ನೀರನ್ನು ಶುದ್ಧೀಕರಿಸಲು ಸಮಸ್ಯೆ ಇಲ್ಲ. ಈಗಾಗಲೇ ಗುತ್ತಿಗೆದಾರನಿಗೆ ವಿಜಯವಾಣಿಯಲ್ಲಿ ಪತ್ರಿಕೆಯಲ್ಲಿ ವರದಿ ಬಂದ ದಿನವೇ ನೋಟಿಸ್ ನೀಡಿದ್ದು, ಪಪಂಗೆ ಎಲ್ಲ ಘಟಕಗಳ ನಿರ್ವಹಣ ವೆಚ್ಚವನ್ನು ಕೂಡಲೇ ಭರಿಸಬೇಕು. ಇಲ್ಲದಿದ್ದಲ್ಲಿ ತಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಹಾಗೂ ಎಲ್ಲ ಘಟಕಗಳನ್ನು ತಕ್ಷಣವೇ ಪಪಂಗೆ ಹಸ್ತಾಂತರಿಸುವಂತೆ ಎಚ್ಚರಿಕೆ ನೋಟಿಸ್ ನೀಡಿರುವುದಾಗಿ ತಿಳಿಸಿದರು.

    ಧನ್ಯವಾದ ಹೇಳಿದ ಶಾಸಕ ಎನ್‌ವೈಜಿ
    ವಿಜಯವಾಣಿಯಲ್ಲಿ ಪ್ರಕಟವಾದ ಕೂಡ್ಲಿಗಿಯ ಆರ್‌ಒ ಪ್ಲಾಂಟ್‌ಗಳ ಅವ್ಯವಸ್ಥೆ ಕುರಿತ ವರದಿ ಗಮನಿಸಿ ಸಂಬಂಧಿಸಿದ ಗುತ್ತಿಗೆದಾರನಿಗೆ ಫೋನ್ ಮಾಡಿದ್ದು, ಫೆ.14ರಂದು ಪಟ್ಟಣಕ್ಕಾಗಮಿಸಿ ಎಲ್ಲ ಘಟಕಗಳ ತಾಂತ್ರಿಕ ಲೋಪ ಸರಿಪಡಿಸಿ ಜನರಿಗೆ ಶುದ್ಧ ನೀರೊದಗಿಸುವ ಭರವಸೆ ನೀಡಿದ್ದಾರೆ. ನಿರ್ಲಕ್ಷೃ ಮಾಡದೇ ಶೀಘ್ರವೇ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ, ಕುಡಿವ ನೀರಿನ ಸಮಸ್ಯೆ ಬಗ್ಗೆ ವರದಿಮಾಡಿ ಬೆಳಕು ಚೆಲ್ಲಿದ್ದಕ್ಕೆ ವಿಜಯವಾಣಿಗೆ ಧನ್ಯವಾದ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts