More

    ಹೈನುಗಾರಿಕೆ ಜತೆಗೆ ಹೆಚ್ಚಿನ ಲಾಭಗಳಿಸಲು ಜೇನುಕೃಷಿ

    ಕೂಡ್ಲಿಗಿ: ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಹಾಗೂ ಬಳ್ಳಾರಿಯ ರಾಬಕೊ ಹಾಲು ಒಕ್ಕೂಟದ ಆಶ್ರಯದಲ್ಲಿ ಪಟ್ಟಣದ ನಂದಿನಿ ಹಾಲು ಶೀತಲಿಕರಣ ಘಟಕದಲ್ಲಿ ವೈಜ್ಞಾನಿಕ ಜೇನು ಕೃಷಿ ತರಬೇತಿ ಗುರುವಾರ ನಡೆಯಿತು.

    ರೈತ ಸಂಘದ ವಿಜಯನಗರ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಬಸವರಾಜ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ರೈತರಿಗೆ ಆದಾಯ ಕಡಿಮೆಯಾಗುತ್ತಿದ್ದು, ಕೃಷಿಯೇತರ ಚಟುವಟಿಕೆಗಳಾದ ಹೈನುಗಾರಿಕೆ ಜತೆಗೆ ಜೇನುಕೃಷಿ ಹೆಚ್ಚಿನ ಲಾಭಗಳಿಸಲು ಉತ್ತಮ ಯೋಜನೆ. ಜೇನು ನೊಣಗಳು ಪರೋಕ್ಷವಾಗಿ ಪರಾಗಸ್ಪರ್ಶ ಮಾಡಿ ಮಕರಂದ ತರುವುದರಿಂದ ಶೇ.30 ಇಳುವರಿ ಹೆಚ್ಚಿಗೆ ಆಗುತ್ತದೆ. ಆರೋಗ್ಯಕ್ಕೂ ತುಂಬಾ ಪರಿಣಾಮಕಾರಿ. ಅದಕ್ಕಾಗಿ ಕೆಎಂಎಫ್ ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಜೇನು ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

    25 ಜನ ಫಲಾನುಭವಿಗಳಿಗೆ ಜೇನು ಕೃಷಿ ಬಗ್ಗೆ ತರಬೇತಿ ನೀಡಲಾಯಿತು. ರಾಬಕೊ ಹಾಲೂ ಒಕ್ಕೂಟದ ನಿರ್ದೇಶಕ ಎಚ್.ಮರುಳಸಿದ್ದಪ್ಪ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಶಾಂತವೀರಯ್ಯ ಮೆಟಿಕುರ್ಕಿ, ಬಳ್ಳಾರಿಯ ಡಾ.ದಾಸನಗೌಡ, ಜೇನು ಕೃಷಿ ಉಪ ವ್ಯವಸ್ಥಾಪಕ ಡಾ.ಶಂಭುಕುಮಾರ್, ಈ.ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts