More

    ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

    ಕೂಡ್ಲಿಗಿ: ನರೇಗಾ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಬಡ ಜನರ ಏಳಿಗೆಗೆ ಸಹಕಾರಿಯಾಗಿದೆ ಎಂದು ಗುಡೇಕೋಟೆ ಗ್ರಾಪಂ ಪಿಡಿಒ ಎಂ.ಮಹಾಂತೇಶಯ್ಯ ತಿಳಿಸಿದರು.

    ಗುಡೇಕೋಟೆ ಗ್ರಾಪಂ ಕಚೇರಿಯಲ್ಲಿ 2022-23ನೇ ಸಾಲಿನ 14-15ನೇ ಹಣಕಾಸು ಯೋಜನೆಯಡಿ ಮೊದಲನೇ ಹಂತದ ಉದ್ಯೋಗ ಖಾತ್ರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆಯಲ್ಲಿ ಮಾತನಾಡಿದರು.

    ಪ್ರತಿ ಬಡ ಕುಟುಂಬಕ್ಕೂ ಕೆಲಸ ಸಿಗಲಿದ್ದು, ಕೂಲಿ ಪಡೆಯಬಹುದಾಗಿದೆ. ಯೋಜನೆಯಡಿಯಲ್ಲಿ ಕೃಷಿ ಹೊಂಡ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ಸಮುದಾಯದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮಸ್ಥರು ವೈಯಕ್ತಿಕ ಜತೆಗೆ ಸಾಮಾಜಿಕ ಕಾಮಗಾರಿಗಳನ್ನು ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಗ್ರಾಪಂ ಅಧ್ಯಕ್ಷ ಎನ್ ಕೃಷ್ಣ, ಉಪಾಧ್ಯಕ್ಷೆ ರತ್ನಮ್ಮ ಚಿನ್ನಸ್ವಾಮಿ, ಸಾಮಾಜಿಕ ಪರಿಶೋಧನೆ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಸುಭಾಶ್ಚಂದ್ರಗೌಡ, ತಾಲೂಕು ವ್ಯವಸ್ಥಾಪಕಿ ಗೀತಾ, ಉದ್ಯೋಗ ಖಾತ್ರಿ ಯೋಜನೆ ಸಂಪನ್ಮೂಲ ವ್ಯಕ್ತಿ ಮೃತ್ಯುಂಜಯ, ಶಾಂತಕುಮಾರ್, ಗುರುಬಸಮ್ಮ, ಬಿ.ಪಾಪಯ್ಯ, ಪಿ.ಕುಮಾರ್, ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts