More

    ತಾಯಿ, ಮಗು ರಕ್ಷಿಸಿದ ಕುಬೇರಪ್ಪ

    ರಟ್ಟಿಹಳ್ಳಿ: ತಾಲೂಕಿನ ತಡಹಕನಹಳ್ಳಿ ಗ್ರಾಮದ ಕೆರೆಯೊಂದರಲ್ಲಿ ಬಿದ್ದ ಮಗು ಮತ್ತು ತಾಯಿಯನ್ನು ರಕ್ಷಿಸಿದ ವ್ಯಕ್ತಿಯೊಬ್ಬರು ತಮ್ಮ ಎಡಗೈ ಮುರಿದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ನ. 13ರಂದು ಲಕ್ಷ್ಮೀಬಾಯಿ ಲಂಬಾಣಿ ಎಂಬುವರು ಮಕ್ಕಳಾದ ಕಿರಣ್ ಮತ್ತು ಕೀರ್ತನಳೊಂದಿಗೆ ಬಟ್ಟೆ ಒಗೆಯಲು ಕೆರೆಗೆ ತೆರಳಿದ್ದರು. ಕೆರೆಯ ದಂಡೆ ಮೇಲಿದ್ದ ತನ್ನ ಮಗ ಕಿರಣ ಮೀನು ಹಿಡಿಯಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗನನ್ನು ರಕ್ಷಣೆ ಮಾಡಲು ತಾಯಿಯೂ ಕೆರೆಗೆ ಹಾರಿದ್ದಾಳೆ. ಇಬ್ಬರು ಕೆರೆಯಲ್ಲಿ ಮುಳುಗುತ್ತಿರುವುದನ್ನು ನೋಡಿದ ಕೀರ್ತನ ತಾಯಿ ಮತ್ತು ಅಣ್ಣನನ್ನು ಕಾಪಾಡುವಂತೆ ಕಿರುಚಾಡಿದ್ದಾಳೆ.

    ಕೆರೆಯ ಬಳಿ ಮನೆ ಇರುವ ಕುಬೇರಪ್ಪ ಬಣಕಾರ, ಜೀವದ ಹಂಗ ತೊರೆದು ಕೆರೆಗೆ ಹಾರಿ ತಾಯಿ ಮತ್ತು ಮಗುವನ್ನು ಎಳೆದು ದಂಡೆಗೆ ತರುವ ಸಂದರ್ಭದಲ್ಲಿ ಗ್ರಾಮಸ್ಥರು ಅವರಿಗೆ ಸಹಕಾರ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ರಕ್ಷಣೆ ಮಾಡಿದ ಕುಬೇರಪ್ಪ ಅವರ ಎಡಗೈಗೆ ಕೆರೆಯಲ್ಲಿನ ಕಲ್ಲು ಬಂಡೆ ಬಡಿದು ಗಾಯವಾಗಿದೆ. ಇವರಿಗೆ ರಟ್ಟಿಹಳ್ಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಣಕಾರಗೆ ಸನ್ಮಾನ: ತಾಯಿ ಮತ್ತು ಮಗುವನ್ನು ರಕ್ಷಣೆ ಮಾಡಿದ ಕುಬೇರಪ್ಪ ಬಣಕಾರ ಮನೆಗೆ ರಟ್ಟಿಹಳ್ಳಿ ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಗೋಪಾಲ ಲಂಬಾಣಿ ಭೇಟಿ ನೀಡಿದ್ದಾರೆ. ನ. 19ರಂದು ಸಚಿವರಾದ ಪ್ರಭು ಚಹ್ವಾಣ, ಲಂಬಾಣಿ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಾವ ಪಮ್ಮಾರ ಸಮ್ಮುಖದಲ್ಲಿ ಕಬೇರಪ್ಪನವರನ್ನು ಸನ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts