More

    ಚುನಾವಣೆ ಬಳಿಕ ಸರ್ಕಾರಿ ಬಸ್‌ಗಳಲ್ಲೂ ಡಿಜಿಟಲ್ ಪಾವತಿ; ಟೆಂಡರ್ ಪ್ರಕ್ರಿಯೆಗೆ ಚಾಲನೆ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ತರಕಾರಿ ವ್ಯಾಪಾರಿ, ಮೀನು ಮಾರುಕಟ್ಟೆ, ದಿನಸಿ ವ್ಯಾಪಾರ, ಮನೆಗಳಿಗೆ ಸೈಕಲ್‌ನಲ್ಲಿ ಮೀನು ಪೂರೈಸುವ ಮಾರಾಟಗಾರ, ಕಚೇರಿಗೆ ಚಹಾ ತರುವ ಹುಡುಗ ಸಹಿತ ದೇಶದ ಎಲ್ಲ ಕಡೆ ಎಲ ರೀತಿಯ ಜನರು ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಯಾವುದೇ ಕಡೆ ಜನರು ವ್ಯವಹಾರಕ್ಕೆ ಹಣದ ಜತೆಗೆ ಇಂದು ಯಾರೂ ಓಡಾಡಬೇಕಾಗಿಲ್ಲ. ಆದರೆ ಎರಡು ನಿಗಮಗಳು ಹೊರತುಪಡಿಸಿದರೆ ಕೆಎಸ್‌ಆರ್‌ಟಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ಇಂದು ಕೂಡ ಮುಹೂರ್ತ ನಿಗದಿಯಾಗಿಲ್ಲ. ಈ ಕೊರಗು ದೂರವಾಗುವ ಕಾಲ ಸಮೀಪಿಸಿದೆ !

    • ಎರಡು ನಿಗಮಗಳಲ್ಲಿ ಜಾರಿ
      ಪ್ರಸ್ತುತ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಬಿಯಂಟಿಸಿ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಚುನಾವಣೆ ನೀತಿ ಸಂಹಿತೆ ಅವಧಿ ಮುಕ್ತಾಯದ ಬೆನ್ನಲ್ಲೇ ಇತರ ಎಲ್ಲ ನಿಗಮಗಳಲ್ಲಿ ಕೂಡ ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿದ್ಧತೆ ಮಾಡಿಕೊಂಡಿದೆ. ಡಿಜಿಟಲ್ ವ್ಯವಸ್ಥೆಯಲ ಟಿಕೆಟ್ ವಿತರಿಸಲು ಆವಶ್ಯಕ ಇಲೆಕ್ಟ್ರೋನಿಕ್ಸ್ ಟಿಕೆಟ್ ಮೆಶಿನ್ (ಇಟಿಎಂ) ಖರೀದಿಗೆ ಟೆಂಡರ್ ಕರೆಯಲಾಗಿದೆ.
      ಇತ್ತೀಚೆಗೆ ಜರುಗಿದ ಕೆಎಸ್‌ಆರ್‌ಟಿಸಿ ರಾಜ್ಯ ಮಟ್ಟದ ಸಭೆಯಲ್ಲಿ ಇಟಿಎಂ ಪರಿಣಾಮಕಾರಿ ಬಳಕೆಗೆ ಸಜ್ಜಾಗುವಂತೆ ಹಿರಿಯ ಅಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
    • ಪ್ರಯೋಜನ
      ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. ದೊಡ್ಡ ಮುಖಬೆಲೆಯ ನೋಟುಗಳು ಸಾಚಾ ಇದೆಯೇ ದೃಢೀಕರಿಸುವ ಆವಶ್ಕತೆ ಇಲ್ಲ. ಹೆಚ್ಚು ಹಣ ಕೈಲ್ಲಿ ಇಟ್ಟುಕೊಂಡು ಒಡಾಡಬೇಕಾಗಿಲ್ಲ. ಆದರೆ ಪ್ರಯಾಣಿಕರು ಬಸ್ ನಿರ್ವಾಹಕರ ಕೈಯಲ್ಲಿ ಇರುವ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ಡಿಜಿಟಲ್ ವ್ಯವಸ್ಥೆಯಲ್ಲಿ ಟಿಕೆಟ್ ಹಣ ಪಾವತಿಸಬಹುದು. ಆದರೆ ಈ ವ್ಯವಸ್ಥೆ ಬಳಸಲು ಸ್ಮಾರ್ಟ್ ಫೋನ್ ಹೊಂದಿರುವುದು ಆವಶ್ಯಕ. ಪ್ರಯಾಣಿಕರು ಪಾವತಿಸಿದ ಹಣ ನೇರವಾಗಿ ನಿಗಮದ ಖಾತೆಗೆ ಜಮಾ ಆಗುತ್ತದೆ. ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇರುವ ಕಡೆ ಹಳೇ ವ್ಯವಸ್ಥೆಯಲ್ಲಿ ಕೂಡ ಟಿಕೆಟ್ ಪಡೆಯಲು ಅವಕಾಶವಿದೆ.
      ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾಗಿ ಭಾರತ ಸರ್ಕಾರವು ನಗದು ರಹಿತ ಆರ್ಥಿಕತೆಯನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಪರಿಚಯಿಸಿದೆ. ಡಿಜಿಟಲ್ ಪಾವತಿಗಳು ಆನ್‌ಲೈನ್ ಮಾಧ್ಯಮಗಳ ಮೂಲಕ ನಡೆಯುತ್ತವೆ.
    • ………….
    • ರಾಜ್ಯದ ಎರಡು ನಿಗಮಗಳಲ್ಲಿ ಈಗಾಗಲೇ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಕರ್ನಾಟಕದಲ್ಲಿ ಜಾರಿಗೊಳಿಸಲು ನಿಗಮದ ಆಡಳಿತ ವ್ಯವಸ್ಥೆ ಸಿದ್ಧತೆ ನಡಡೆಸಿಕೊಂಡಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿದ ಸಭೆಯಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗಿತ್ತು. ಚಿಲ್ಲರೆ ಸಮಸ್ಯೆ ನಿವಾರಣೆ ಹಾಗೂ ಸುಲಭ ವ್ಯವಹಾರಕ್ಕೆ ಹೊಸ ವ್ಯವಸ್ಥೆಯಿಂದ ಅನುಕೂಲವಾಗಲಿದೆ.
    • ರಾಜೇಶ್ ಶೆಟ್ಟಿ,
      ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಕಾರಿ, ಮಂಗಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts