More

    ‘ಕೆಎಸ್​ಆರ್​ಟಿಸಿಗೆ ಕೊಟ್ಟ ಚೆಕ್​ ಮೇಲೆ ನನ್ನ ಸಹಿ ಇಲ್ಲ..ಹಾಗಾಗಿ ಅದು ನಕಲಿ ಎಂದು ಅಶೋಕಣ್ಣ ಹೇಳಿದಾರೆ..ಆದ್ರೆ….’

    ಬೆಂಗಳೂರು: ಕೂಲಿ ಕಾರ್ಮಿಕರನ್ನು ಉಚಿತವಾಗಿ ಅವರ ಊರುಗಳಿಗೆ ತಲುಪಿಸಲು ಕೆಪಿಸಿಸಿಯಿಂದ ಕೆಎಸ್​ಆರ್​ಟಿಸಿಗೆ ನೀಡಲಾದ 1 ಕೋಟಿ ರೂ.ಚೆಕ್​ನಲ್ಲಿ ಡಿ.ಕೆ.ಶಿವಕುಮಾರ್ ಸಹಿ ಇಲ್ಲ..ಅದೊಂದು ನಕಲಿ ಚೆಕ್​ ಎಂದು ಸಚಿವ ಆರ್​. ಅಶೋಕ್​ ಹೇಳಿದ್ದರು.

    ಈ ಚೆಕ್​ ಪಡೆಯಲು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಕೂಡ ನಿರಾಕರಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಚೆಕ್​ ನೀಡಿದರೂ ಅದನ್ನು ಲಕ್ಷ್ಮಣ್​ ಸವದಿ ಸ್ವೀಕರಿಸಿಲ್ಲ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಹೇಳಿಕೆ ನೀಡಿದ್ದಾರೆ.
    ಲಕ್ಷ್ಮಣ್​ ಸವದಿಯವರನ್ನು ಭೇಟಿಯಾದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಚೆಕ್​ ಅವರು ತೆಗೆದುಕೊಂಡಿಲ್ಲ. ಬದಲಿಗೆ ಸಿಎಂ ಪರಿಹಾರ ನಿಧಿಗೆ ನೀಡಿ ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

    ಇದನ್ನೂ ಓದಿ: ಕೆಪಿಸಿಸಿ​ ಕೆಎಸ್​ಆರ್​ಟಿಸಿಗೆ ಕೊಟ್ಟ 1 ಕೋಟಿ ರೂ.ಚೆಕ್​ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಸಚಿವ ಆರ್.ಅಶೋಕ್​…!

    ಹಾಗೇ ಸಚಿವ ಅಶೋಕಣ್ಣ ನಮ್ಮ ಚೆಕ್​ ನಕಲಿ ಎಂದಿದ್ದಾರೆ. ನಮ್ಮ ಪಕ್ಷ, ಮುಖಂಡರ ಹಿನ್ನೆಲೆ ನೋಡಿ ಅವರು ಮಾತನಾಡಬೇಕು. ಚೆಕ್ ಮೇಲೆ ನನ್ನ ಸಹಿ ಇಲ್ಲ ಸರಿ. ಆದರೆ ದಿನೇಶ್ ಗುಂಡೂರಾವ್ ಅವರ ಸಹಿ ಇದೆಯಲ್ಲ. ಅಲ್ಲಿ ಯಾರ ಸಹಿ ಇದೆ ಎಂಬುದು ನಮ್ಮ ಪಕ್ಷದ ವಿಚಾರ. ಆದರೆ ಅಷ್ಟಕ್ಕೇ ನಕಲಿ ಎಂದು ಹೇಳುವುದು ಎಷ್ಟು ಸರಿ? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

    ಹಾಗೇ ಆರ್​.ಅಶೋಕ್ ಅವರು ಕಾಂಗ್ರೆಸ್​ನವರು ಕೊಡುವುದಾದರೆ 100 ಕೋಟಿ ರೂ.ನೀಡಲಿ ಎಂದು ಸವಾಲು ಹಾಕಿದ್ದರು. ಅದಕ್ಕೆ ಉತ್ತರಿಸಿದ ಡಿ.ಕೆ.ಶಿವಕುಮಾರ್​, ಅಶೋಕ್​ ನಮಗೆ ಬೆಲೆ ಕಟ್ಟುತ್ತಿದ್ದಾರೆ. ಆದ್ರೆ ನಾವು ಹಾಗೆ ಬೆಲೆ ಕಟ್ಟೋದಿಲ್ಲ. ಇಡೀ ಕಾಂಗ್ರೆಸ್​ ಪಕ್ಷ ಸರ್ಕಾರದ ಜತೆಗೆ ಇದೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: 5000 ರೂ.ಗೆ ಮುಂಬೈನಿಂದ ಲಾರಿಯಲ್ಲಿ ಕರೊನಾ ಸೋಂಕು ತಂದ ಚಾಲಕ; ಕೇಳಿದ್ದಕ್ಕೆ ‘ತೊಳೆದೆ’ ಎಂದ…ಆದ್ರೆ ಲಾರಿನಲ್ಲ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts