More

    ಕರಾಮುವಿ: ಜೂನ್ 30ರೊಳಗೆ ಪರೀಕ್ಷಾ ಶುಲ್ಕ ಪಾವತಿಸಿ

    ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಪ್ರಾದೇಶಿಕ ಕೇಂದ್ರ ಬೆಂಗಳೂರು)ದ ವಿವಿಧ ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾಗೆ ಪ್ರವೇಶ ಪಡೆದು ಅನುತ್ತೀರ್ಣರಾಗಿರುವ/ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಗೆ ಜೂನ್ 30 ಕೊನೆ ದಿನವಾಗಿದೆ.
    2001-02 ರಿಂದ 2010-11ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಬಿಎ/ ಬಿ.ಕಾಂ ಪದವಿಗಳು, 2001-02 ರಿಂದ 2012-13 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದ ಬಿ.ಲಿಬ್. ಐಎಸ್ಸಿ, ಬಿಎಡ್, ಬಿ.ಎಡ್ (ವಿಶೇಷ), ಎಲ್ಲ ಡಿಪ್ಲೊಮಾ/ ಸರ್ಟಿಫಿಕೇಟ್ ಪ್ರೊಗ್ರಾಮ್​ಗಳು ಮತ್ತು 2001- 02 ರಿಂದ 2012-13 ಎಲ್ಲಿ ಪ್ರವೇಶ ಪಡೆದ ಸ್ನಾತಕೋತ್ತರ (ವಾರ್ಷಿಕ/ ಸೆಮಿಸ್ಟರ್) ಪದವಿಗಳಾದ ಎಂಎ/ ಎಂ.ಕಾಂ., ಎಂಬಿಎ, ಎಂ.ಎಡ್., ಎಂ.ಲಿಬ್. ಐ.ಎಸ್ಸಿ ಎಲ್ಲ ಎಂಎಸ್ಸಿ ಮತ್ತು ಸ್ನಾತಕೋತ್ತರ ಡಿಪ್ಲೊಮಾ ವಿದ್ಯಾರ್ಥಿಗಳು ಪ್ರವೇಶ ಪಡೆದು ಅನುತ್ತೀರ್ಣರಾಗಿರುವ/ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಒಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿ ಪರೀಕ್ಷಾ ಶುಲ್ಕ ಪಾವತಿಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

    ಇದನ್ನೂ ಓದಿ: ಅರೆರೆ..! ಹುಲಿರಾಜ ಬೀದಿಗಿಳಿದ …!

    ವಿದ್ಯಾರ್ಥಿಗಳ ಮನವಿಯ ಮೇರೆಗೆ ಮತ್ತು ಕೋವಿಡ್- 19 ನಿಂದಾಗಿ ಜೂನ್ 30 ರವರೆಗೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ ಎಂದು ವಿವಿ ತಿಳಿಸಿದೆ.
    ಪರೀಕ್ಷಾ ವೇಳಾಪಟ್ಟಿಯನ್ನು ವಿವಿಯ ವೆಬ್​ಸೈಟ್ www.ksoumysuru.ac.in ನಲ್ಲಿ ಪ್ರಕಟಿಸಲಾಗುವುದೆಂದು ಪ್ರಾದೇಶಿಕ ನಿರ್ದೇಶಕ ಗಿರೀಶ್ ಎಚ್.ಎನ್. ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ನಿಗ್ರಹಕ್ಕೆ ಅಶ್ವಗಂಧವೇ ಮದ್ದು? ಆಯುರ್ವೇದಕ್ಕೆ ಜಪಾನ್​ನಿಂದಲೂ ಆಸಕ್ತಿ 

    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515405 ಅಥವಾ ವಿವಿಯ ವೆಬ್​ಸೈಟ್ ಸಂಪರ್ಕಿಸಬಹುದು ಅಥವಾ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಬೆಂಗಳೂರು ಪ್ರಾದೇಶಿಕ ಕೇಂದ್ರ, ನಂ.61,5 ನೇ ಮುಖ್ಯರಸ್ತೆ, 5ನೇ ಅಡ್ಡ ರಸ್ತೆ, ಚಾಮರಾಜಪೇಟೆ, ಬೆಂಗಳೂರು, ಕಚೇರಿ ದೂರವಾಣಿ ಸಂಖ್ಯೆ 080-26603664 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    ಮುಂಬೈ ರಕ್ಷಣೆಗೀಗ ಕೇಂದ್ರೀಯ ಪಡೆಗಳೇ ದಿಕ್ಕು…! ಏನಾಗಿದೆ ಪೊಲೀಸರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts