More

    500 ಕೋಟಿ ಬಜೆಟ್​ನಲ್ಲೊಂದು ಪ್ಯಾನ್​ ಇಂಡಿಯಾ ಸಿನಿಮಾ!

    ಬೆಂಗಳೂರು: ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ‘ಕೆಜಿಎಫ್’, ‘ವಿಕ್ರಾಂತ್ ರೋಣ’, ‘ಕಬ್ಜ’ದಂಥ ದೊಡ್ಡ ಬಜೆಟ್​ನ ಹಲವು ಪ್ಯಾನ್​ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಈ ಚಿತ್ರದ ಬಜೆಟ್​ 500 ಕೋಟಿ ರೂ.ಗಳಂತೆ.

    ಇದನ್ನೂ ಓದಿ: ಇದ್ದಿದ್ದು ಇದ್ದಂಗೆ: ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್ ಸಂವಾದದಲ್ಲಿ ನಟ ನೀನಾಸಂ ಸತೀಶ್…

    ಇಂಥ ದೊಡ್ಡ ಯೋಜನೆಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ ಸ್ವಾಮೀಜಿ. ೧೯೯೫ರಿಂದ ಕನ್ನಡ ಚಿತ್ರರಂಗದಲ್ಲಿ ಟ್ರ್ಯಾಕ್ ಸಿಂಗರ್ ಆಗಿ ಗುರುತಿರಿಸಿಕೊಂಡಿರುವ ಅವರು, ಆನಂತರ ಚಿನ್ನದ ವ್ಯಾಪಾರದಲ್ಲಿ ತೊಡಗಿಸಿಕೊಂಡರಂತೆ. ಇವರೀಗ ಐನೂರು ಕೋಟಿಯ ಬಿಗ್‌ಬಜೆಟ್ ಚಿತ್ರವೊಂದನ್ನು ಏಳು ಭಾಷೆಗಳಲ್ಲಿ ನಿರ್ಮಿಸಲು ಹೊರಟಿದ್ದಾರೆ.

    ಈ ಚಿತ್ರದ ಶೀರ್ಷಿಕೆ ಹಾಗೂ ಜಿ.ಎಸ್.ಆರ್.ಫಿಲಂ ಪ್ರೊಡಕ್ಷನ್ಸ್ ಎನ್ನುವ ಬ್ಯಾನರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸದ್ಯ ಚಿತ್ರದ ಕಥೆ ರೆಡಿಯಾಗಿದ್ದು, ನಿರ್ದೇಶಕ, ನಾಯಕ, ನಾಯಕಿ ಯಾರು ಎಂಬುದು ಇನ್ನಷ್ಟೇ ಫೈನಲ್​ ಆಗಬೇಕಿದೆ. ಈ ಚಿತ್ರಕ್ಕೆ ‘ಕೃಷ್ಣರಾಜ-೪’ ಎಂಬ ಹೆಸರನ್ನು ಇಡಲಾಗಿದೆ.

    ಇದನ್ನೂ ಓದಿ: ಒಟಿಟಿಯಲ್ಲಿ ಬರಲಿದೆ ಪದ್ಮಶ್ರೀ ಪುರಸ್ಕೃತ ನಟಿ ಭಾರತಿ ವಿಷ್ಣುವರ್ಧನ್​ ಅವರ ‘ಬಾಳೆ ಬಂಗಾರ’

    ‘ಕೃಷ್ಣರಾಜ-೪’ ಚಿತ್ರದ ಕುರಿತು ಮಾತನಾಡುವ ಗಾನಶರವಣ ಸ್ವಾಮೀಜಿ, ‘ಮೂರು ವರ್ಷಗಳ ಹಿಂದೆ ಕಥೆ ಹೊಳೆಯಿತು. ಐತಿಹಾಸಿಕ ಹಾಗೂ ಸಾಮಾಜಿಕ ಹಿನ್ನೆಲೆ ಇರುವ ಕಥೆ ಇದು. ಚಿತ್ರದ ಬಜೆಟ್ ೪೦೦ರಿಂದ ೫೦೦ ಕೋಟಿ ರೂ. ಆಗಲಿದೆ. ಇದರ ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ನಡೆಯಲಿದೆ. ಭಾರತದಲ್ಲಿ ಹೆಸರು ಮಾಡಿರುವ ನಿರ್ದೇಶಕರೊಬ್ಬರನ್ನು ನಮ್ಮ ಚಿತ್ರಕ್ಕೆ ಕರೆತರುವ ಪ್ಲಾನ್ ಇದೆ. ನಾಯಕನ ಪಾತ್ರಕ್ಕೂ ತೂಕದ ವ್ಯಕ್ತಿಯನ್ನು ಹುಡುಕುತ್ತಿದ್ದೇವೆ. ನಮ್ಮ ಲೀಗಲ್ ಅಡ್ವೆಜರ್ ಆದ ಎಂ.ವಿ. ಅದಿತಿ ಅವರು ಚಿತ್ರದ ಸಹ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎನ್ನುತ್ತಾರೆ.

    ನಟ ಧ್ರುವ ಸರ್ಜಾ ಈಗ ಮಾರ್ಟಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts