More

    ಕ್ಯಾಮೆರಾಮ್ಯಾನ್​ ಕೃಷ್ಣ ಬಿಡುಗಡೆ ಮಾಡಿದ ಈ ಕ್ಯಾಲೆಂಡರ್​ನ ವಿಶೇಷತೆ ಏನು?

    ಕ್ಯಾಮೆರಾಮ್ಯಾನ್​ ಕೃಷ್ಣ ಬಿಡುಗಡೆ ಮಾಡಿದ ಈ ಕ್ಯಾಲೆಂಡರ್​ನ ವಿಶೇಷತೆ ಏನು?ಬೆಂಗಳೂರು: ಸಾಮಾನ್ಯವಾಗಿ ಹೊಸ ವರ್ಷದ ಕ್ಯಾಲೆಂಡರ್ ಎಂದರೆ ಸುಂದರ ಪರಿಸರ, ತಳುಕು-ಬಳುಕಿನ ಫೋಟೋಗಳು, ಝಗಮಗಿಸುವ ಚಿತ್ತಾರಗಳೇ ತುಂಬಿರುತ್ತವೆ. ಆದರೆ, 2021ರ ಕ್ಯಾಲೆಂಡರ್ ವಿಭಿನ್ನವಾಗಿರಬೇಕೆಂಬ ದೃಷ್ಟಿಯಲ್ಲಿ ಇನ್ವೋಕ್​ ಫೌಂಡೇಶನ್​ನ ಸಂಸ್ಥಾಪಕ ಸಾಗರ್​ ಹೆಜ್ಜೆ ಇಟ್ಟಿದ್ದಾರೆ. ಅವರ ಸಹೋದರ ಮತ್ತು ‘ಮುಂಗಾರು ಮಳೆ’ ಖ್ಯಾತಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಕ್ಯಾಲೆಂಡರ್​ ಬಿಡುಗಡೆ ಮಾಡಿದ್ದಾರೆ.

    ಇದನ್ನೂ ಓದಿ: ಚಿತ್ರೀಕರಣವೂ ಮುಗೀತು; ಇದೀಗ ಟೀಸರ್​ ಸಹ ಬಿಡುಗಡೆಯಾಯ್ತು …

    ಇಷ್ಟಕ್ಕೂ ಈ ಕ್ಯಾಲೆಂಡರ್​ನಲ್ಲಿ ಏನಿದೆ ಎಂಬ ಪ್ರಶ್ನೆ ಬರುವುದು ಸಹಜ. ಇದೊಂದು ಸ್ಫೂರ್ತಿದಾಯಕ ಕ್ಯಾಲೆಂಡರ್​ ಆಗಿದ್ದು, ಸಾಧಕರ ಕುರಿತಾಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಗಳನ್ನು ಪರಿಚಯಿಸುವ ಕ್ಯಾಲೆಂಡರ್​ ಇದಾಗಿದ್ದು, ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕ್ರೀಡಾಪಟುಗಳು, ಮಾಡೆಲ್​ಗಳನ್ನು ಅವರ ಕಿರುಪರಿಚಯದೊಂದಿಗೆ ಪರಿಚಯಿಸಲಾಗಿದೆ. ಒಂದೊಂದು ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳನ್ನೊಳಗೊಂಡ ಕಥೆಗಳು ಎಂಥವರಿಗೂ ಸ್ಪೂರ್ತಿಯ ಚಿಲುಮೆ.

    ಇಂಥದ್ದೊಂದು ಸುಂದರ ಪರಿಕಲ್ಪನೆಯ ಕ್ಯಾಲೆಂಡರ್ ಹೊತ್ತು ತಂದಿರುವುದು ಇನ್ವೋಕ್ ಫೌಂಡೇಶನ್​. ಈ ಸಂಸ್ಥೆಯ ಸಾಗರ್​ಗೆ ಅಪಘಾತವೊಂದರಲ್ಲಿ ಸ್ಪೈನಲ್ ಕಾರ್ಡ್’ಗೆ ಬಲವಾದ ಪೆಟ್ಟು ಬಿದ್ದಿತ್ತು. ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಸ್ಥೆಯೇ ಇನ್ವೋಕ್ ಫೌಂಡೇಶನ್. ಈ ಸಂಸ್ಥೆಯಿಂದ ಮೂಡಿಬಂದಿರುವ ಈ ಕ್ಯಾಲೆಂಡರ್​ನ್ನು ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿ, ಸಾಗರ್ ಪರಿಶ್ರಮ ಹಾಗೂ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿದ್ದಾರೆ.

    ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಯನ್ ಶರತ್ ಗಾಯಕ್ವಾಡ್, ಅಡ್ವೆಂಚರ್ ಟೂರಿಸ್ಟ್ ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸರ್ ಆಗಿರುವ ಜಯಂತ್, ಕ್ರಿಕೆಟರ್ಸ್ ಅಶ್ವಿನಿ-ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೇರಿದಂತೆ ಇನ್ನೂ ಅನೇಕರು ಈ ಕ್ಯಾಲೆಂಡರ್’ನಲ್ಲಿದ್ದಾರೆ.

    ಇದನ್ನೂ ಓದಿ: ‘ಸಲಾರ್​’ ಚಿತ್ರತಂಡಕ್ಕೆ ಸೇರ್ಪಡೆಯಾದ ಮತ್ತೊಬ್ಬ ಕನ್ನಡಿಗ …

    ಮತ್ತೊಂದು ವಿಶೇಷವೆಂದರೆ ಈ ಕ್ಯಾಲೆಂಡರ್ ಫೋಟೋಶೂಟ್ ಹಾಗೂ ಮೇಕಿಂಗ್ ಸಿನಿಮಾ ಕ್ವಾಲಿಟಿಯಲ್ಲಿ ಮಾಡಲಾಗಿದೆ.

    ಈ ವರ್ಷ ರಂಜಿಸಲು ಬರ್ತಿದ್ದಾರೆ ‘ಕಿಂಗ್​ ಖಾನ್​’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts