More

    ಕೃಷ್ಣಜನ್ಮಭೂಮಿ ಅರ್ಜಿ ತಿರಸ್ಕರಿಸಿದ ಲೋಕಲ್ ಕೋರ್ಟ್: ಮುಂದೇನು?

    ನವದೆಹಲಿ: ಮಥುರಾದ ಕೃಷ್ಣಜನ್ಮಭೂಮಿ – ಈದ್ಗಾ ವಿವಾದಕ್ಕೆ ಸಂಬಂಧಿಸಿದ ಅರ್ಜಿಯನ್ನು ಸಿಟಿ ಸಿವಿಲ್ ಕೋರ್ಟ್​ ಬುಧವಾರ ತಿರಸ್ಕರಿಸಿದೆ. ಕೃಷ್ಣಜನ್ಮಭೂಮಿಗೆ ತಾಗಿಕೊಂಡಿರುವ ಮಸೀದಿ ತೆರವುಗೊಳಿಸಬೇಕೆಂಬ ಮನವಿ ಅರ್ಜಿ ಅದಾಗಿತ್ತು.

    ಮಥುರಾ ಕೋರ್ಟ್ ನ್ಯಾಯಾಧೀಶ ಛಾಯಾ ಶರ್ಮಾ ಅವರಿದ್ದ ನ್ಯಾಯಪೀಠದಲ್ಲಿ ಶ್ರೀಕೃಷ್ಣ ವಿರಾಜಮಾನ್ ಮತ್ತು ಏಳು ಇತರರು ಸೆಪ್ಟೆಂಬರ್ 25ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣ ಜನ್ಮಭೂಮಿಯಲ್ಲಿ ಬಾಲಕೃಷ್ಣ ದೇವರ ಒಡೆತನದಲ್ಲಿರುವ 13.37 ಎಕರೆ ಜಮೀನಿನಲ್ಲಿ ರಾಯಲ್ ಈದ್ಗಾ ಮಸೀದಿ ಇದೆ. ಅದನ್ನು ಅಲ್ಲಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು. ಆದರೆ, ಯಥಾಸ್ಥಿತಿ ಕಾಪಾಡುವ ಆದೇಶ ಹಾಗೂ ಲೋಕಲ್ ಕೋರ್ಟ್​ಗಳಲ್ಲಿ ವಿಚಾರಣೆ ನಡೆಸುವುದಕ್ಕೆ ಅವಕಾಶ ಇಲ್ಲದ ಕಾರಣ ನ್ಯಾಯಪೀಠ ಇದನ್ನು ತಿರಸ್ಕರಿಸಿದೆ. ಹೀಗಾಗಿ ದೂರುದಾರರು ಈಗ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

    ಇದನ್ನೂ ಓದಿ:  ಬ್ಯಾಂಕ್​ ಪ್ರವೇಶಿಸಿದ 11ರ ಬಾಲಕ ಮಾಡಿದ್ದೇನು?!

    ರಾಮಜನ್ಮಭೂಮಿ ವಿವಾದ ಇತ್ಯರ್ಥಗೊಂಡ ಬೆನ್ನಲ್ಲೇ ಹಿಂದು ಸಂಘಟನೆಗಳು ಕೃಷ್ಣಜನ್ಮಭೂಮಿ ವಿವಾದ ಇತ್ಯರ್ಥಗೊಳಿಸುವ ಕಡೆಗೆ ಗಮನಹರಿಸುವುದಾಗಿ ಘೋಷಿಸಿದ್ದವು. ಇದರಂತೆ, ಈಗ ಕೃಷ್ಣ ಜನ್ಮಭೂಮಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಅಖಾಡ ಪರಿಷತ್​ನ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಪ್ರತಿಕ್ರಿಯಿಸಿದ್ದು, ಅಕ್ಟೋಬರ್ 15 ರಂದು ವೃಂದಾವನದಲ್ಲಿ ನಡೆಯಲಿರುವ ಅಖಾಡ ಪರಿಷತ್ ಸಭೆಯಲ್ಲಿ ಮಥುರಾ ತಂತ್ರಗಾರಿಕೆ ತೀರ್ಮಾನವಾಗಲಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ದಿವಂಗತ ಸುರೇಶ್ ಅಂಗಡಿ ಸಮಾಧಿ, ರುದ್ರಭೂಮಿಗೆ ತಡೆಗೋಡೆ ನಿರ್ಮಾಣಕ್ಕೆ ಸಿಎಂಗೆ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts