More

    ಕೃಷಿಕ ಸಂಘಟನೆಗೆ ಹೆಚ್ಚು ಶ್ರಮಿಸಿ

    ಮಳವಳ್ಳಿ : ದೊಡ್ಡ ಜನ ಸಮೂಹವಾಗಿರುವ ಕೃಷಿಕರನ್ನು ಸಂಘಟಿಸುವ ಮೂಲಕ ಶೋಷಣೆ ನಿರ್ಮೂಲನೆಗೆ ಶ್ರಮಿಸೋಣ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಹಣಕಾಸು ಕಾರ್ಯದರ್ಶಿ ಎಚ್. ಆರ್. ನವೀನ್ ಕುಮಾರ್ ತಿಳಿಸಿದರು.
    ತಾಲೂಕಿನ ಶಿವನ ಸಮುದ್ರದ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು. ಸಂಘಟನೆ ಮತ್ತು ಜಾಗೃತಿಯೇ ನಮ್ಮ ಸಂಸ್ಥೆ ಮುಖ್ಯ ಧ್ಯೇಯ. ಪ್ರತಿಯೊಂದು ಹಳ್ಳಿಯ ಪ್ರತಿಯೊಬ್ಬ ರೈತರನ್ನೂ ಸಾಮೂಹಿಕ ಸದಸ್ಯತ್ವದ ವಿಧಾನದ ಮೂಲಕ ನಮ್ಮ ವ್ಯಾಪ್ತಿಗೆ ಸೇರಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
    ಬಡ ರೈತರು ಮತ್ತು ಕೃಷಿ ಕೂಲಿಕಾರರ ಒಗ್ಗಟ್ಟಿನ ಆಧಾರದ ಮೇಲೆ ಇಡೀ ರೈತ ಸಮೂಹವನ್ನು ಸಜ್ಜು ಗೊಳಿಸಿದಾಗ ಮಾತ್ರ ರೈತ ಚಳವಳಿ ಉದ್ದೇಶ ಈಡೇರುತ್ತದೆ. ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಸಂಘಟನೆಯನ್ನು ಸೀಮಿತಗೊಳಿಸಬೇಡಿ. ರಾಜ್ಯದ ಎಲ್ಲ ಗ್ರಾಮಕ್ಕೂ ನಮ್ಮ ಕಾರ್ಯ ವ್ಯಾಪ್ತಿ ವಿಸ್ತರಿಸಿ ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಚಳವಳಿ ಪ್ರಬಲವಾಗಲಿ: ಆಳುವ ವರ್ಗಗಳು ರೈತ ಸಮುದಾಯವನ್ನು ಮೌಢ್ಯಕ್ಕೆ ತಳ್ಳುತ್ತಿದ್ದಾರೆ. ಕೃಷಿಕರ ಸಮಸ್ಯೆಗಳಿಗೆ ಹಣೆಬರಹ ಮತ್ತು ಕರ್ಮಸಿದ್ಧಾಂತವೇ ಕಾರಣ ಎಂದು ಕೊಂಡು ಹಲವು ಕೃಷಿಕರು ಹಿಂದೆ ಉಳಿದಿದ್ದಾರೆ.
    ಶೋಷಣೆ ನೀತಿಗಳ ವಿರುದ್ಧ ಪ್ರಬಲ ಚಳವಳಿಯನ್ನು ನಾವು ಕಟ್ಟಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನೂತನ ಜಿಲ್ಲಾ ಸಮಿತಿ ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಚಾಲಕರಾಗಿ ಭರತ ರಾಜ್, ಸಹ ಸಂಚಾಲಕರಾಗಿ ಎನ್. ಲಿಂಗರಾಜ ಮೂರ್ತಿ, ಎಂ.ಇ ಮಹದೇವು, ಎಸ್. ವಿಶ್ವನಾಥ, ಟಿ. ಆರ್. ಸಿದ್ದೇಗೌಡ, ಜಿಲ್ಲಾ ಸಮಿತಿಯ ಸದಸ್ಯರಾಗಿ ಪ್ರಮೀಳಾ, ಗುರುಸ್ವಾಮಿ, ರಾಮಣ್ಣ, ಸತೀಶ ಆಯ್ಕೆಯಾದರು.
    ಸಂಘದ ಮದ್ದೂರು ತಾಲೂಕು ಅಧ್ಯಕ್ಷ ವಿಶ್ವನಾಥ, ಮಳವಳ್ಳಿ ತಾಲೂಕು ಅಧ್ಯಕ್ಷ ಭರರ ರಾಜ್, ಟಿ. ಯಶವಂತ, ಎನ್. ಲಿಂಗರಾಜಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts