More

    ಕೃಷಿಮೇಳ ಸದುಪಯೋಗ ಪಡೆದುಕೊಳ್ಳಲಿ

    ಮೂಡಲಗಿ: ಪಟ್ಟಣದ ನವರಾತ್ರಿ ಉತ್ಸವ ಕಮಿಟಿಯಿಂದ ನವರಾತ್ರಿ ಉತ್ಸವ ಅಂಗವಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಬರ್ಡ್ಸ್ ತುಕ್ಕಾನಟ್ಟಿ ಹಾಗೂ ಶಿವಬೋಧರಂಗ ಪಿಕೆಪಿಎಸ್ ಮೂಡಲಗಿ ಸಹಯೋಗದಲ್ಲಿ ಅ.17ರಿಂದ 19ರ ವರೆಗೆ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ನವರಾತ್ರಿ ಉತ್ಸವ ಕಮಿಟಿ ಸದಸ್ಯ ಕುಮಾರ ಗಿರಡ್ಡಿ ಹೇಳಿದರು.

    ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರೈತಾಪಿ ವರ್ಗಕ್ಕೆ ಉಪಯೋಗವಾಗುವಂತಹ ಸಲಕರಣೆಗಳು, ಯಂತ್ರೋಪಕರಣ, ಸಾವಯವ ಕೃಷಿ, ಸಿರಿಧಾನ್ಯ, ವಿಜ್ಞಾನ ವಸ್ತು ಪ್ರದರ್ಶನ, ಶ್ವಾನ ಪ್ರದರ್ಶನ, ಸಿರಿಧಾನ್ಯ ಓಟದ ಸ್ಪರ್ಧೆ, ಸಿರಿಧಾನ್ಯ ್ಯಾಶನ್ ಶೋ, ಸಿರಿಧ್ಯಾನ ಪ್ಲವರ್ ಶೋ, ಜೈವಿಕ ಗೊಬ್ಬರ ಹಾಗೂ ಕೀಟನಾಶಕ, ಜೇನು ಕೃಷಿ, ಚಿತ್ರಕಲಾ ಪ್ರದರ್ಶನ, ರೈತರ ಆತ್ಮಹತ್ಯೆ ತಡೆ ಕುರಿತು ನಾಟಕ ಸೇರಿ ವಿವಿಧ ವಿಷಯಗಳ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕೃಷಿ ಮೇಳ ಆಯೋಜಿಸಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ನವರಾತ್ರಿ ಉತ್ಸವ ಕಮಿಟಿ ಸದಸ್ಯ ಕೃಷ್ಣಾ ನಾಶಿ ಮಾತನಾಡಿ, ಅ. 15ರಿಂದ ನವರಾತ್ರಿ ಉತ್ಸವ ವೇದಿಕೆಯಲ್ಲಿ ಪ್ರತಿ ವರ್ಷದಂತೆ ವಿವಿಧ ತೆರನಾದ ಸಂಸ್ಕೃತಿ ಕಾರ್ಯಕ್ರಮಗಳು, ದುರ್ಗಾ ಮಾತೆಗೆ ವಿವಿಧ ಪೂಜೆಗಳು 9 ದಿನಗಳ ಕಾಲ ಜರುಗಲಿವೆ ಎಂದರು. ನವರಾತ್ರಿ ಉತ್ಸವ ಕಮಿಟಿ ಸದಸ್ಯರಾದ ಅಜ್ಜಪ್ಪ ಅಂಗಡಿ, ಈಶ್ವರ ಮುರಗೋಡ, ಜಗದೀಶ ತೇಲಿ, ಶಿವಬೋಧ ಮಠಮತಿ, ಹಣಮಂತ ಸತರಡ್ಡಿ, ಸದಾಶಿವ ನಿಡಗುಂದಿ, ಈರಪ್ಪ ಢವಳೇಶ್ವರ, ಪ್ರಭು ತೇರದಾಳ, ಅಜ್ಜಪ್ಪ ಜೀರಾಳೆ, ಚೇತನ ನಿಶಾನಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts