More

    ಕೆಪಿಎಸ್​​ಸಿ ಪ್ರಕಟಿಸಿದ ವಿವಿಧ ಹುದ್ದೆಗಳ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ ನೋಡಿ

    ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ವಿವಿಧ ಪರೀಕ್ಷೆಗಳನ್ನು ಮುಂದೂಡಿದ್ದ ಕರ್ನಾಟಕ ಲೋಕಸೇವಾ ಆಯೋಗ ಈಗ ದಿನಾಂಕ ಮರು ನಿಗದಿಪಡಿಸಿದೆ.
    ಅದರಂತೆ, ಕರ್ನಾಟಕ ರಾಜ್ಯ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ ಗ್ರೂಪ್ ಎ ವೃಂದದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳಿಗೆ ಜುಲೈ 7 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಭಾರತದ ಆರ್ಥಿಕತೆ ಸದೃಢ ಮಾಡಲು ಧನಸಹಾಯ ಮಾಡ್ತಾರಂತೆ ಪಾಕ್​ ಪ್ರಧಾನಿ!

    ಅಂದು ಬೆಳಗ್ಗೆ 10 ರಿಂದ 12 ರ ವರೆಗೆ ಪತ್ರಿಕೆ 1- ಸಾಮಾನ್ಯ ಅಧ್ಯಯನ ಹಾಗೂ ಮಧ್ಯಾಹ್ನ 2.30 ರಿಂದ 4.30ರ ವರೆಗೆ ಪತ್ರಿಕೆ 2- ಅಪ್ಟಿಟ್ಯೂಡ್ ಟೆಸ್ಟ್ ನಡೆಯಲಿದೆ.
    ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಜುಲೈ 19 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಗಡಿ ವಿವಾದ: ಭಾರತದೊಂದಿಗೆ ಸಂಘರ್ಷಕ್ಕೆ ಸಿದ್ಧವಾದ ನೇಪಾಳ

    ಅಂದು ಬೆಳಗ್ಗೆ 10 ರಿಂದ 12 ರ ವರೆಗೆ ಪತ್ರಿಕೆ 1 – ಸಾಮಾನ್ಯ ಅಧ್ಯಯನ ಹಾಗೂ ಮಧ್ಯಾಹ್ನ 2 ರಿಂದ 4 ವರೆಗೆ ಪತ್ರಿಕೆ 2- ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣೆ ವಿಷಯದ ಪರೀಕ್ಷೆ ನಡೆಯಲಿದೆ.
    2017-18 ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳಿಗೆ ಆಗಸ್ಟ್ 2 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
    ಅಂದು ಬೆಳಗ್ಗೆ 10 ರಿಂದ 12 ರವರೆಗೆ ಪತ್ರಿಕೆ 1, ಹಾಗೂ ಮಧ್ಯಾಹ್ನ 2 ರಿಂದ 4 ರ ವರೆಗೆ ಪತ್ರಿಕೆ 2ರ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್​​ಸಿ ಪ್ರಕಟಣ ತಿಳಿಸಿದೆ.

    ಅಯ್ಯಪ್ಪ ಭಕ್ತರಿಗೆ ಸದ್ಯಕ್ಕಿಲ್ಲ ಶಬರಿಮಲೆಗೆ ಪ್ರವೇಶ; ಉತ್ಸವ ಮುಂದೂಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts