More

    ಅನಾರೋಗ್ಯದ ನೆಪವೊಡ್ಡಿ ಸಂಧಾನ ಸಭೆ ಮೊಟಕುಗೊಳಿಸಿದ ಓಲಿ

    ನವದೆಹಲಿ: ನೇಪಾಳದಲ್ಲಿ ಮೂಡಿರುವ ರಾಜಕೀಯ ಅಸ್ಥಿರತೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ನಾಯಕರು ಬುಧವಾರದಿಂದ ಮತ್ತೊಂದು ಸುತ್ತಿನ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ತಮ್ಮ ನಿವಾಸಕ್ಕೆ ಬಂದಿದ್ದ ತಮ್ಮ ಕಟ್ಟಾ ಎದುರಾಳಿ ಪುಷ್ಪ ಕುಮಾರ್​ ಧಹಾಲ್​ ಪ್ರಚಂಡಾ ಅವರನ್ನು ಪ್ರಧಾನಿ ಕೆ.ಪಿ. ಶರ್ಮ ಓಲಿ ಭೇಟಿಯಾಗಿದ್ದರು.

    ಮಾತುಕತೆ ಮುಂದುವರಿದಿರುವಂತೆ ಓಲಿ ಅವರ ರಾಜೀನಾಮೆಗೆ ಪ್ರಚಂಡಾ ಒತ್ತಡ ಹೇರಲಾರಂಭಿಸಿದರು. ಈ ಹಂತದಲ್ಲಿ ಅಸ್ವಸ್ಥರಾದವರಂತೆ ನಾಟಕ ಆಡಿದ ಪ್ರಧಾನಿ ಓಲಿ 15 ನಿಮಿಷಗಳಲ್ಲಿ ಸಂಧಾನ ಸಭೆಯನ್ನು ಮೊಟಕುಗೊಳಿಸಿ ತೆರಳಿದರು ಎನ್ನಲಾಗಿದೆ.

    ಇದನ್ನೂ ಓದಿ: ಭಾರತ ಮತ್ತು ನೇಪಾಳದ ನಡುವೆ ಸಾಂಸ್ಕೃತಿಕ ಭಿನ್ನಮತ ಸೃಷ್ಟಿಸುವ ಯತ್ನ

    ಮಾಜಿ ಪ್ರಧಾನಿಯೂ ಆಗಿರುವ ಧಹಾಲ್​, ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಸಹ ಅಧ್ಯಕ್ಷ ಸ್ಥಾನ ಇಲ್ಲವೇ ಪ್ರಧಾನಿ ಹುದ್ದೆಯನ್ನು ತ್ಯಜಿಸುವಂತೆ ಓಲಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಪಕ್ಷದ ಸ್ಥಾಯಿ ಸಮಿತಿಯ ಶೇ.90 ಸದಸ್ಯರು ಕೂಡ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ಓಲಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ಕುಟಿಲ ತಂತ್ರಗಳನ್ನು ಅನುಸರಿಸುತ್ತಿರುವ ಓಲಿ ಅವರು ಧಹಾಲ್​ ಅವರ ಒತ್ತಡದಿಂದ ಪಾರಾಗುತ್ತಲೇ ಇದ್ದಾರೆ. ಚೀನಾದ ಸಂಪೂರ್ಣ ಬೆಂಬಲ ಹೊಂದಿರುವ ಅವರು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸುವ ಧಹಾಲ್ ಅವರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸುತ್ತಿದ್ದಾರೆ.

    ಚೀನಾದ ಅಭೂತಪೂರ್ವ ಬೆಂಬಲ ಹೊಂದಿರುವ ಓಲಿ, ಭಾರತದ ಪ್ರದೇಶಗಳು ಕೂಡ ತಮ್ಮದೆಂದು ಬಿಂಬಿಸಿ ಪರಿಷ್ಕೃತ ನಕ್ಷೆಯನ್ನು ಸಿದ್ಧಪಡಿಸಿ, ಸಂಸತ್​ನ ಉಭಯ ಸದನಗಳಲ್ಲೂ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಭಾರತದಲ್ಲಿ ಪತ್ತೆಯಾಗಿರುವ ಕರೊನಾ ವೈರಾಣು ಚೀನಾ ಅಥವಾ ಇಟಲಿಯಲ್ಲಿ ಪತ್ತೆಯಾಗಿರುವ ಕರೊನಾ ವೈರಾಣುಗಿಂತ ಪ್ರಬಲವಾಗಿದೆ ಎಂಬಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜತೆಗೆ, ತಮ್ಮ ಸರ್ಕಾರವನ್ನು ಉರುಳಿಸಲು ಭಾರತ ಸಂಚು ರೂಪಿಸಿರುವುದಾಗಿ ಆರೋಪಿಸುತ್ತಿದ್ದಾರೆ.

    ಬಿಜೆಪಿ ಮುಖಂಡನ ಕೊಲೆ ಬೆನ್ನಲ್ಲೇ ಮತ್ತೊಬ್ಬ ಮುಖಂಡನ ಕಿಡ್ನಾಪ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts