More

    ಕೊಟ್ಟೂರಲ್ಲಿ ಕೆಆರ್‌ಐಡಿಎಲ್ ಕಾಮಗಾರಿ ನನೆಗುದಿಗೆ: ಇಂಜಿನಿಯರ್ ವಿರುದ್ಧ ಸಂಸದ ದೇವೇಂದ್ರಪ್ಪ ಗರಂ

    ಕೊಟ್ಟೂರು: 2016 ರಿಂದ 18ರವರೆಗೆ ಸಂಸದರ ಅನುದಾನದಡಿ 10 ಕೋಟಿ ರೂ.ಗೂ ಅಧಿಕ ಹಣ ಮಂಜೂರಾಗಿದೆ. ಆದರೆ, ಕೆಆರ್‌ಐಡಿಎಲ್ ಕಾಮಗಾರಿಗಳನ್ನು ಮುಗಿಸದ್ದಕ್ಕೆ ಇಂಜಿನಿಯರ್ ಚಂದ್ರನಾಯ್ಕರನ್ನು ಸಂಸದ ವೈ.ದೇವೇಂದ್ರಪ್ಪ ತರಾಟೆಗೆ ತೆಗೆದುಕೊಂಡರು.

    ಪಟ್ಟಣದ ತಾಲೂಕು ಕಚೇರಿ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸೋಮವಾರ ತಾಪಂ ಅಧ್ಯಕ್ಷ ಎಸ್.ಗುರುಮೂರ್ತಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜನರಿಗಾಗಿ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡಿದರೆ ಅಧಿಕಾರಿಗಳು ನೆಪ ಹೇಳಿ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವುದು ಸರಿಯಲ್ಲ. ಸರ್ಕಾರಿ ಕಾಲೇಜ್ ಆವರಣದಲ್ಲಿ ಜಿಪಂ ಅನುದಾನ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡಗಳ ಉದ್ಘಾಟನೆಗೆ ಆಹ್ವಾನಿಸದಿರುವುದಕ್ಕೆ ಜಿಪಂ ಇಂಜಿನಿಯರ್ ಮಲ್ಲಿಕಾರ್ಜುನ ವಿರುದ್ಧ ಸಂಸದರು ಹರಿಹಾಯ್ದ ಹರಿಹಾಯ್ದರು.

    ಕೊಟ್ಟೂರೇಶ್ವರ ಸ್ವಾಮಿ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, 10 ದಿನದೊಳಗೆ ಪಟ್ಟಣದ ಎಲ್ಲ ಶುದ್ಧ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು. ಬೇಸಿಗೆ ಆರಂಭವಾಗಲಿದ್ದು, ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಬೇಕೆಂದು ಜಲಾನಯನ ಅಧಿಕಾರಿ ಮರಿಸ್ವಾಮಿಗೆ ಎಂಪಿ ದೇವೇಂದ್ರಪ್ಪ ಆದೇಶಿಸಿದರು. ಪಾದಯಾತ್ರೆ ಮೂಲಕ ಬರುವ ಭಕ್ತರ ಆರೋಗ್ಯ ತಪಾಸಣೆಗೆ ಹೆಚ್ಚಿನ ವೈದ್ಯರ ನಿಯೋಜಿಸುವಂತೆ ವೈದ್ಯಾಧಿಕಾರಿ ಪೃಥ್ವಿಗೆ ತಾಪಂ ಅಧ್ಯಕ್ಷ ಎಸ್.ಗುರುಮೂರ್ತಿ ಸೂಚಿಸಿದರು. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಂಸದರು ಸೂಚಿಸಿದರು. ತಾಪಂ ಸಂಯೋಜಕ ಬೆಣ್ಣಿ ವಿಜಯಕುಮಾರ, ಎಡಿ ಕೆಂಚಪ್ಪ, ಕೊಗಳಿ ಜಿಪಂ ಸದಸ್ಯ ಆನಂದ, ತಾಪಂ ಸದಸ್ಯರಾದ ಕೊಚಾಲಿ ಸುಶೀಲಾ ಮಂಜುನಾಥ, ಅಕ್ಕಮ್ಮ ರಂಗಪ್ಪ, ನಾಗನಾಯ್ಕ ಹಾಗೂ 21 ಇಲಾಖೆ ಅಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts