More

    ನವರಾತ್ರಿ ಸಂದರ್ಭ ಕರೊನಾ ನಿಯಮ ಅನುಷ್ಠಾನ ಕಡ್ಡಾಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

    ಗಂಗೊಳ್ಳಿ: ನವರಾತ್ರಿ ಸಂದರ್ಭ ಮನೆಗಳಿಗೆ, ಅಂಗಡಿಗಳಿಗೆ ಭೇಟಿ ನೀಡುವ ವೇಷಗಳ ಕುರಿತು ನಿರ್ದಿಷ್ಟ ನಿಬರ್ಂಧ ವಿಧಿಸಿಲ್ಲ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಕರೊನಾ ನಿಯಮಗಳಿಗೆ ತೊಂದರೆಯುಂಟು ಮಾಡುವ ಕ್ರಮಗಳಿಗೆ ಅವಕಾಶ ಇಲ್ಲ. ಧಾರ್ಮಿಕ ಕ್ಷೇತ್ರದ ಎದುರು ಸಂಪ್ರದಾಯ ಪ್ರಕಾರ ನಡೆಯುವ ಹುಲಿವೇಷ ಒಂದು ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಅಲ್ಲಿಯೂ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

    ಶುಕ್ರವಾರ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಸಾರ್ವಜನಿಕ ಅಹವಾಲು ಸಲ್ಲಿಕೆ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

    ಕೋವಿಡ್-19 ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು ಸರಳ ಸಾಂಸ್ಕೃತಿಕ ಕಾರ್ಯಕ್ರಮ, ಪೂಜೆಗಳಿಗೆ ಅನುಮತಿ ನೀಡಲಾಗಿದೆ. ಮೈಸೂರು ದಸರಾ ಸೇರಿದಂತೆ ಎಲ್ಲೆಡೆ ದೇವಾಲಯಗಳಲ್ಲಿ ಇದೇ ಮಾದರಿಯಲ್ಲಿ ಸರಳ ದಸರಾ ಆಚರಣೆ ನಡೆಯಬೇಕೆಂದು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಸರಳ ದಸರಾ ಆಚರಣೆ ನಡೆಯಲಿದೆ ಎಂದರು.

    ಯಕ್ಷ ಕಲಾವಿದರಿಗೆ ಕಡ್ಡಾಯ ಪರೀಕ್ಷೆ
    ಯಕ್ಷಗಾನ ಮೇಳ ಹೊರಡುವ ಮುನ್ನ ಯಕ್ಷಗಾನ ಕಲಾವಿದರಿಗೆ ಕರೊನಾ ಪರೀಕ್ಷೆ ಕಡ್ಡಾಯ ಮಾಡಲಾಗುವುದು. ಮೇಳ ಹೊರಟ ನಂತವೂ ವಾರಕ್ಕೊಮ್ಮೆ ಉಚಿತ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಲಾಗುವುದು. ಮೇಳದ ತಿರುಗಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ದೇವಳ ಸಿಬ್ಬಂದಿಗೆ ಪಿಎಫ್ ಹಾಗೂ ಇಎಸ್‌ಐ ಸೌಲಭ್ಯ ನೀಡುವ ಪ್ರಸ್ತಾಪ ಇಲಾಖೆಯಲ್ಲಿದೆ. ಕರೊನಾ ಕಾರಣದಿಂದ ವಿಳಂಬವಾಗಿದೆ ಎಂದು ಶ್ರೀನಿವಾಸ ಪೂಜಾರಿ ತಿಳಿಸಿದರು.

    ಭೋಜನ ವ್ಯವಸ್ಥೆ ಬೇಡ
    ಉಡುಪಿ: ನವರಾತ್ರಿ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಹೊಸದಾಗಿ ಭೋಜನ ವ್ಯವಸ್ಥೆ ಮಾಡುವಂತಿಲ್ಲ. ಆದರೆ ಈಗಾಗಲೇ ಭಕ್ತರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಇರುವ ಕೊಲ್ಲೂರು, ಮಂದಾರ್ತಿ ಮೊದಲಾದ ಕೆಲವು ದೇವಸ್ಥಾನಗಳಲ್ಲಿ ಅಂತರ ಪಾಲಿಸಿಕೊಂಡು ಮುಂದುವರಿಸಬಹುದು ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts