More

    ಸಾಸ್ತಾನ ರಿಕ್ಷಾ ನಿಲ್ದಾಣ ವಿವಾದ: ಕೋಟ ಠಾಣೆಯಲ್ಲಿ ಸಂಧಾನ ಸಭೆ

    ಕೋಟ: ಸಾಸ್ತಾನ- ಕೋಡಿ ಮೀನುಗಾರಿಕೆ ರಸ್ತೆಯಲ್ಲಿರುವ ಆಟೋ ನಿಲ್ದಾಣದಿಂದ ಪಾದಚಾರಿ ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಐರೋಡಿ ಗ್ರಾಪಂ ದೂರಿನ ಮೇರೆಗೆ ಕೋಟ ಠಾಣಾಧಿಕಾರಿಗಳು ನಿಲ್ದಾಣವನ್ನು ತೆರವುಗೊಳಿಸಿದ್ದು, ಈ ವಿಚಾರವಾಗಿ ಎರಡು ಬಣಗಳ ನಡುವೆ ಅಸಮಾಧಾನ ಮೂಡಿತ್ತು. ಈ ಕುರಿತು ಠಾಣಾಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.

    ಈ ಸಂದರ್ಭ ಯಾವುದೇ ಕಾರಣಕ್ಕೂ ನಿಲ್ದಾಣಕ್ಕೆ ಅವಕಾಶ ನೀಡಬಾರದು ಎಂದು ಒಂದು ಬಣದವರು ಪಟ್ಟು ಹಿಡಿದರು. ಮಾನವೀಯತೆ ನೆಲೆಯಲ್ಲಿ ಎರಡೇ ಎರಡು ರಿಕ್ಷಾಗಳನ್ನು ನಿಲುಗಡೆ ಮಾಡಲು ಸಂತೆ ಮಾರುಕಟ್ಟೆ ಬಳಿ ಅವಕಾಶ ನೀಡಬೇಕು, ನಾವು ಸರದಿಯಂತೆ ಆಟೋ ನಿಲುಗಡೆ ಮಾಡುತ್ತೇವೆ ಎಂದು ಒಂದು ಬಣದವರು ಮನವಿ ಮಾಡಿದರು. ಕಾನೂನಾತ್ಮಕವಾಗಿ ರಿಕ್ಷಾ ನಿಲುಗಡೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ತಮ್ಮೊಳಗೆ ರಾಜಿ ಮಾತುಕತೆ ಮೂಲಕವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಶಾಂತಿ-ಸುವ್ಯವಸ್ಥೆ ಕಾಪಾಡಿ ಎಂದು ಠಾಣಾಧಿಕಾರಿಗಳು ತಿಳಿಸಿದರು.

    ಐರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಶೆಟ್ಟಿ, ಪಿಡಿಒ ರಾಜೇಶ ಶೆಣೈ, ಉಪಾಧ್ಯಕ್ಷ ನಟರಾಜ್ ಗಾಣಿಗ, ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ್ ಮೆಂಡನ್, ಪಿಡಿಒ ಹಾಗೂ ಆಟೋ ಚಾಲಕ- ಮಾಲೀಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts