More

    ಸ್ವಾತಂತ್ರ್ಯ, ಸಮಾನತೆಗಾಗಿ ನಡೆದ ಚರಿತ್ರೆ: ಕದಸಂಸ ಅಧ್ಯಕ್ಷ ವೆಂಕಟಗಿರಿಯಯ್ಯ ಬಣ್ಣನೆ

    ಮಂಡ್ಯ: ಭಾರತೀಯ ಚರಿತ್ರೆಯಲ್ಲಿ ಮನುಷ್ಯ ಮನುಷ್ಯರನ್ನಾಗಿ ಕಾಣುವ ಮೂಲಕ ಮಹಾಮಾನವೀಯವಾಗಿ ಬದುಕಲು ಆರ್ಯ-ಬ್ರಾಹ್ಮಣ್ಯಕ್ಕೆ ಎಚ್ಚರಿಸಿದ ದಿನವೇ ಜ.1ರ ಭೀಮಾ ಕೋರೇಂಗಾವ್ ಮಹಾಯುದ್ಧ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.
    ನಗರದ ಗಾಂಧಿಭವನದಲ್ಲಿ ಕದಸಂಸ ಜಿಲ್ಲಾ ಶಾಖೆಯಿಂದ ಆಯೋಜಿಸಿದ್ದ ಭೀಮಾಕೋರೇಂಗಾವ್ ಮಹಾಯುದ್ದ ಅಸ್ಪಶ್ಯರ ವಿಜಯೋತ್ಸವ ಮತ್ತು ಮಹರ್ ರೆಜಿಮೆಂಟ್‌ವೀರ ಯೋಧರಿಗೆ ನಮನ ಹಾಗೂ ನೈಜ್ಯ ಸ್ವಾತಂತ್ರ್ಯ ಸಂಗ್ರಾಮ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
    ಭೀಮಾಕೋರೇಂಗಾವ್ ವಿಜಯೋತ್ಸವವು ನೈಜ್ಯ ಸ್ವಾತಂತ್ರ್ಯ ಸಂಗ್ರಾಮದ ಸಂಕಲ್ಪವಾಗಿದೆ. ಈ ನೆಲದ ಮೂಲನಿವಾಸಿಗಳಾದ ಎಸ್ಸಿ, ಎಸ್ಟಿ ಓಬಿಸಿಗಳ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆಗಾಗಿ ನಡೆದ ಚರಿತ್ರೆಯನ್ನು ಪ್ರಚುರಪಡಿಸಬೇಕಿದೆ ಎಂದು ನುಡಿದರು.
    ಮಾನವ ವಿರೋಧಿ ಮನುಸ್ಮತಿ ಪ್ರೇರಿತವಾದ ಆರ್ಯ, ಬ್ರಾಹ್ಮಣ್ಯದ ಚಾತುರ್‌ವರ್ಣ ಪದ್ಧತಿ, ಜಾತಿ ವರ್ಗ, ಲಿಂಗ ಬೇಧ ನೀತಿಯ ಅಸಮಾನತೆ ವ್ಯವಸ್ಥೆ ಜತೆಗೆ ದೇವರು-ಧರ್ಮದ ಹೆಸರಲ್ಲಿ ಯಜ್ಞ-ಯಾಗಗಳ ಅಂಧಾನುಕರಣೆಯ ಜೀವವಿರೋಧಿ ನೀತಿಯನ್ನು ಪ್ರಕರವಾಗಿ ಖಂಡಿಸಬೇಕಿದೆ.
    ಅವ್ವ ಸಂಸ್ಕೃತಿ ಪರಂಪರೆಯುಳ್ಳ ಭಾರತೀಯ ಮೂಲನಿವಾಗಿಗಳಾದ ಸಿಂಧು ಕಣಿವೆ ನಾಗರಿಕರ ಇತಿಹಾಸವನ್ನು ತಿರುಚಿ ಪ್ರಾಕೃತಿಕ ಜೀವನಕ್ಕೆ ವಿರೋಧಿಯಾದ ಆರ್ಯ, ಬ್ರಾಹ್ಮಣ್ಯದ ಅನಾಗರಿಕತೆಯ ವಿರುದ್ಧ ನಿರಂತರವಾಗಿ ಹೋರಾಟ ಮಾಡಿ ಸೋಲಿಸಿ ಅವ್ವ ಸಂಸ್ಕೃತಿಯ ಪ್ರಬುದ್ಧ ಭಾರತ ಕಟ್ಟಬೇಕಿದೆ ಎಂದು ವಿವರಿಸಿದರು.
    ಪ್ರಗತಿಪರ ಚಿಂತಕ ಅರಕಲವಾಡಿ ನಾಗೇಂದ್ರ ಮಾತನಾಡಿ, ದೇಶದ ಸಾಕಷ್ಟು ಜನತೆಗೆ ಮತ್ತು ವಿದ್ಯಾವಂತರಿಗೆ ಜ.1ರ ಭೀಮಾಕೋರೇಂಗಾವ್ ಮಹಾಯುದ್ದ ಸ್ವಾಭಿಮಾನದ ರಕ್ತಚರಿತ್ರೆ ಗೊತಿಲ್ಲ. 5 ವರ್ಷಗಳಿಂದೀಚೆಗೆ ದೇಶದಲ್ಲಿ ಭೀಮಾಕೋರೇಂಗಾವ್ ವಿಚಾರ ವಿಸ್ತಾರಗೊಳ್ಳುತ್ತಿದೆ. ಹಳ್ಳಿ ಹಳ್ಳಿಗಳತ್ತ ಸಾಗಿ ಸ್ವಾಭಿಮಾನದ ಸಂಕೇತವನ್ನು ಅರಳಿಸುತ್ತಿದೆ ಎಂದು ನುಡಿದರು.
    ಭೀಮಾಕೋರೇಂಗಾವ್ ಎಂದರೆ ಮಹಾರಾಷ್ಟ್ರದ ಭೀಮತೀರದಲ್ಲಿರುವ ಕೋರೇಂಗಾವ್ ಗ್ರಾಮದಲ್ಲಿ ಮನುಸ್ಕೃತಿ ಆಡಳಿತದ ಪೇಶ್ವೆಗಳಿಗೂ, ಮಹಾರ್‌ರೆಜಿಮೆಂಟ್ ಸೈನಿಕರಿಗೂ ನಡೆದ ಮಹಾಯುದ್ಧ. ಐತಿಹ್ಯ, ಸ್ವಾಭಿಮಾನದ ಬದುಕಿಗಾಗಿ, ಶಿಕ್ಷಣಕ್ಕಾಗಿ, ಗೌರವಯುತ ಉದ್ಯೋಗಕ್ಕಾಗಿ ಹೋರಾಡಿ ವಿಜಯಸಾಧಿಸಿದ ದಿನವಾಗಿದೆ ಎಂದು ವಿವರಿಸಿದರು.
    ಪ್ರಗತಿಪರ ಸಾಹಿತಿ ಕೆ.ಮಾಯಿಗೌಡ, ಕದಸಂಸ ಜಿಲ್ಲಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ನಿವೃತ್ತ ನೌಕರ ಟಿ.ಕೃಷ್ಣಯ್ಯ, ಪ್ರಗತಿಪರ ಹೋರಾಟಗಾರ ವೈ,ಥಾಮಸ್ ಬೆಂಜಮಿನ್, ಮಹಿಳಾಧ್ಯಕ್ಷೆ ಮಮತಾ, ಆನಂದ್, ಗೋವಿಂದರಾಜ್, ನಂಜುಂಡಮೌರ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts