More

    ಕೊರಗ ಸಮುದಾಯದವರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ

    ಕೊಕ್ಕರ್ಣೆ: 38ನೇ ಕಳ್ತೂರು ಗ್ರಾಪಂ ಆವರಣದಲ್ಲಿ ಸೋಮವಾರ ಬುಕ್ಕಿಗುಡ್ಡೆ ಕೊರಗರ ಹಾಡಿ ಮತ್ತು ಕೋಲ್ ಬೆಟ್ಟು ಗುಡ್ಡೆ ಕೊರಗರ ಹಾಡಿ ಸಮುದಾಯದವರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

    38ನೇ ಕಳ್ತೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂರು ಕೊರಗ ಗುಂಪುಗಳಿದ್ದು(43 ಕುಟುಂಬ)ವರ್ಗ 1ರ ಅನುದಾನಕ್ಕೆ ಸಂಭಂಧಿಸಿ 2021-22ರ ಸಾಲಿನ ಕ್ರೀಯಾ ಯೋಜನೆ ತಯಾರಿಸುವಾಗ ನಮ್ಮ ಗುಂಪಿಗೆ ಯಾವುದೇ ಅನುದಾನ ನೀಡದೆ ಇರುವ ಕುರಿತು ಈ ಹಿಂದೆ ಶೇ.30ರಷ್ಟು ಅನುದಾನವನ್ನು ಕೊರಗ ಸಮುದಾಯದವರಿಗೆ ಮೀಸಲಿಡಲು ಸರ್ಕಾರ ಆದೇಶಿಸಿದ್ದರೂ ಈ ಅನುದಾನವನ್ನು ಸಮಾನವಾಗಿ ಮೂರು ಗುಂಪುಗಳಿಗೂ ನೀಡಬೇಕು ಎಂದು ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ.

    ಕೊರಗ ಸಮುದಾಯದ ಮುಖಂಡರುಗಳಾದ ದಿವಾಕರ, ನೀಲು, ಗೋಪಾಲ, ಲಕ್ಷ್ಮೀ, ಸುಂದರ ಕೋಲ್ ಬೆಟ್ಟುಗುಡ್ಡೆ, ಸುನೀಲ್, ಬೊಗ್ರ ಕೊರಗ ಮುಂತಾದವರು ಉಪಸ್ಥಿತರಿದ್ದರು.
    ಧರಣಿ ಸತ್ಯಾಗ್ರಹದಲ್ಲಿ ಸಮುದಾಯದವರು ಅಡುಗೆ ಪಾತ್ರೆಗಳು, ಗ್ಯಾಸ್, ಅಕ್ಕಿ, ನೀರು ಮತ್ತು ಪುಟಾಣಿ ಮಕ್ಕಳೊಂದಿಗೆ ಟರ್ಪಾಲ್ ಹೊದಿಕೆಯೊಂದಿಗೆ ತಮ್ಮ ಬೇಡಿಕೆ ಈಡೇರುವ ತನಕ ಈ ಧರಣಿ ಕುಳಿತ ಜಾಗದಿಂದ ಕದಲದೇ ಇರಲು ನಿರ್ಧರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts