More

    ಅಂಗನವಾಡಿಗಳಿಗೆ ಜೆಜೆಎಂ ನೀರು ಪೂರೈಕೆಲ ಸಚಿವ ಹಾಲಪ್ಪ ಆಚಾರ್ ಹೇಳಿಕೆ

    ಯಲಬುರ್ಗಾ: ಅಂಗನವಾಡಿಗಳು ಮಕ್ಕಳು ಹಾಗೂ ಗರ್ಭಿಣಿಯರು, ಬಾಣಂತಿಯರಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
    ದಮ್ಮೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎರಡು ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಲಾಖೆಯ ಸೌಲಭ್ಯ ಅರ್ಹರಿಗೆ ತಲುಪಿಸಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಕ್ಕಳ ಕಲಿಕೆಗೆ ಹೆಚ್ಚು ಗಮನಹರಿಸಬೇಕು. ಅಂಗನವಾಡಿ ಸುತ್ತ ಸ್ವಚ್ಛತೆ, ಕುಡಿವ ನೀರು ಕಲ್ಪಿಸಲು ಗ್ರಾಪಂ ಕ್ರಮ ವಹಿಸಬೇಕು. ಕೇಂದ್ರಗಳು ಕೊರತೆ ಇರುವ ಗ್ರಾಮಗಳನ್ನು ಗುರುತಿಸಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡ ಒದಗಿಸಲಾಗುತ್ತಿದೆ. ಈಗಾಗಲೇ 19 ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಶೀಘ್ರವೇ ಎಲ್ಲ ಕೇಂದ್ರಗಳಿಗೂ ಜೆಜೆಎಂ ಮೂಲಕ ನೀರು ಪೂರೈಸಲು ಆದೇಶಿಸಲಾಗುವುದು ಎಂದರು.
    ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಬಾಳಪ್ಪ ತುಮ್ಮರಗುದ್ದಿ, ಉಪಾಧ್ಯಕ್ಷೆ ಬಸಮ್ಮ ಹಿರೇಮಠ, ಸದಸ್ಯರಾದ ಹೊಳಿಯಮ್ಮ ಹಳ್ಳಿಕೇರಿ, ಭೀಮಪ್ಪ ಜರಕುಂಟಿ, ಗಾಳೆಮ್ಮ ಹರಿಜನ್, ಸೋಮಪ್ಪ ರಾಠೋಡ, ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ತಹಸೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಸಂತೋಷ ಪಾಟೀಲ್, ಸಿಡಿಪಿಒ ಸಿಂಧು ಎಲಿಗಾರ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ರತನ್ ದೇಸಾಯಿ, ಶರಣಪ್ಪ ಈಳಿಗೇರ್, ರಸೂಲ್‌ಸಾಬ್ ದಮ್ಮೂರು, ಡಿ.ಮೌನೇಶ ಬಡಿಗೇರ್, ಆನಂದ ಈಳಿಗೇರ್, ಹನುಮರಡ್ಡಿ ರಡ್ಡೇರ್, ಶರಣಪ್ಪ ಹೊಸ್ಕೇರಾ, ವೀರಪ್ಪ ರ‌್ಯಾವಣಕಿ, ಬಸವರಾಜ ಉಪ್ಪಾರ, ಗಣೇಶ ನಿಡಗುಂದಿ, ರವಿ ಕಲಬುರ್ಗಿ ಇತರರಿದ್ದರು.

    ಅಂಗನವಾಡಿಗಳಿಗೆ ಜೆಜೆಎಂ ನೀರು ಪೂರೈಕೆಲ ಸಚಿವ ಹಾಲಪ್ಪ ಆಚಾರ್ ಹೇಳಿಕೆ
    ದಮ್ಮೂರಿನಲ್ಲಿ ನೂತನ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್‌ಗೆ ಮಕ್ಕಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಸಿಡಿಪಿಒ ಸಿಂಧು ಎಲಿಗಾರ, ಮುಖಂಡರಾದ ಡಿ.ಮೌನೇಶ ಬಡಿಗೇರ್, ವೀರಣ್ಣ ಹುಬ್ಬಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts