More

    ಕೊಪ್ಪಳ ಜಿಲ್ಲೆಯ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ: ಸಂಸದ ಸಂಗಣ್ಣ ಕರಡಿ ಹೇಳಿಕೆ

    ಕೊಪ್ಪಳ: ಜಿಲ್ಲೆಯ ಕುಡಿವ ನೀರು, ಬ್ಯಾರೇಜ್ ನಿರ್ಮಾಣ ಹಾಗೂ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 413 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

    ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳ, ಗಂಗಾವತಿ ತಾಲೂಕಿನ ಜಲಜೀವನ್ ಮಿಷನ್, ಬಹುಗ್ರಾಮ ಕುಡಿವ ನೀರು ಯೋಜನೆಗಳಿಗೆ 413.15 ಕೋಟಿ ಹಾಗೂ ಭಾಗ್ಯನಗರ ಬಳಿ ಹಿರೇಹಳ್ಳಕ್ಕೆ ಬ್ಯಾರೇಜ್ ನಿರ್ಮಾಣ ಕಾಮಗಾರಿಯ 12.42 ಕೋಟಿ ರೂ. ಬಿಡುಗಡೆಗೆ ಅನುಮೋದನೆ ದೊರೆತಿದೆ. ಗಂಗಾವತಿ ತಾಲೂಕಿನ ಹೇರೂರು ಮತ್ತು ಇತರ 14 ಗ್ರಾಮಗಳು, ಹುಲಿಹೈದರ್ ಮತ್ತು ಇತರ 12 ಗ್ರಾಮಗಳ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ 43.15 ಕೋಟಿ, ಚಿಕ್ಕಬೆಣಕಲ್ ಮತ್ತು 61 ಜನವಸತಿಗೆ 110 ಕೋಟಿ, ಕೆರೆಹಳ್ಳಿ ಮತ್ತು ಇತರ 103 ಜನವಸತಿ 260 ಕೋಟಿ ರೂ. ಮಂಜೂರು ಮಾಡಲಾಗಿದೆ. ಭಾಗ್ಯನಗರ ಸೇತುವೆ ಕಾಮಗಾರಿಗೆ 12.42 ಕೋಟಿ ರೂ. ನೀಡಿರುವುದು ಜಿಲ್ಲೆಗೆ ಅಭಿವೃದ್ಧಿಗೆ ಅನುಕೂಲವಾಗಿದೆ. ಹೊಸಳ್ಳಿ-ಕೊಪ್ಪಳ ಸಿಸಿ ರಸ್ತೆಗೆ 9.50 ಕೋಟಿ, ಗೊಂಡಬಾಳ-ಗಿಣಗೇರಿ ಸಿಸಿ ರಸ್ತೆಗೆ 5.10 ಕೋಟಿ ರೂ., ಕಲ್ಮಲಾ-ಶಿಗ್ಗಾಂವ (ರಾ.ಹೆ-23)ಡಾಂಬರೀಕರಣಕ್ಕೆ 9.95 ಕೋಟಿ ರೂ. ಅನುದಾನ ಒದಗಿಸಿದ್ದು, ಕೊಪ್ಪಳ ಕ್ಷೇತ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts