More

    ಸಾರಿಗೆ ನೌಕರರಿಗೆ ರಕ್ಷಣೆ ನೀಡಿ: ಎಸ್ಪಿ ಅರುಣಾಂಗ್ಷು ಗಿರಿಗೆ ಮನವಿ

    ಕೊಪ್ಪಳ: ಕುಷ್ಟಗಿ ಘಟಕದ ಚಾಲಕ ಹನುಮಗೌಡ ಹಾಗೂ ನಿರ್ವಾಹಕ ರಾಜೇಸಾಬ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರ ಕೂಟದ ಜಿಲ್ಲಾ ಪದಾಧಿಕಾರಿಗಳು ಗುರುವಾರ ಎಸ್ಪಿ ಅರುಣಾಂಗ್ಷು ಗಿರಿಗೆ ಮನವಿ ಸಲ್ಲಿಸಿದರು.

    ಜ.31ರಂದು ಕುಷ್ಟಗಿ-ಕೊಪ್ಪಳ ಮಾರ್ಗವಾಗಿ ಬರುವ ಬಸ್ ಹತ್ತಿದ ವಿದ್ಯಾರ್ಥಿಯೋರ್ವ ಸೀಟು ಖಾಲಿ ಇದ್ದರೂ ಫುಟ್ ಬೋರ್ಡ್‌ನಲ್ಲಿ ನಿಂತಿದ್ದಕ್ಕೆ ಸಂಬಂಧಿಸಿದಂತೆ ನಿವಾರ್ಹಕ ರಾಜೇಸಾಬ್ ಜತೆ ವಾಗ್ವಾದ ಮಾಡಿ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾನೆ. ಕೊಪ್ಪಳದಿಂದ ವಾಸಪ್ ಕುಷ್ಟಗಿಗೆ ತೆರಳುವಾಗ ಇದೇ ಬಸ್ ಹತ್ತಿದ್ದು, ಕುದರಿಮೋತಿ ಕ್ರಾಸ್ ಬಳಿ ಸಂಬಂಧಿಗಳನ್ನು ಕರೆಸಿ ಚಾಲಕ ಹಾಗೂ ನಿರ್ವಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಘಟನೆ ನಡೆದು ಎರಡು ದಿನಗಳ ಬಳಿಕ ಚಾಲಕ ಹಾಗೂ ನಿರ್ವಾಹರ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆಂದು ಅಳಲು ತೋಡಿಕೊಂಡರು.

    ಸಾರಿಗೆ ಸಿಬ್ಬಂದಿಗೆ ಕರ್ತವ್ಯದ ವೇಳೆ ಹಲ್ಲೆ ಮಾಡಿದ್ದಲ್ಲದೆ ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಇದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ಸುಳ್ಳು ದೂರನ್ನು ರದ್ದುಪಡಿಸಬೇಕು. ಕರ್ತವ್ಯದ ವೇಳೆಯಲ್ಲಿ ಸಾರಿಗೆ ನೌಕರರಿಗೆ ರಕ್ಷಣೆ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೂಟದ ಜಿಲ್ಲಾಧ್ಯಕ್ಷ ಮಂಜುನಾಥರಡ್ಡಿ, ಪ್ರಧಾನ ಕಾರ್ಯದರ್ಶಿ ಖಾದರ್ ಖಾನ್, ನಾಗೇಶ ಬಡಿಗೇರ, ಅನ್ನಪೂರ್ಣಾ, ಮಂಜುನಾಥ, ಫಕೀರಪ್ಪ ಬಡಿಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts