More

    ಮಹನೀಯರ ಆದರ್ಶ ಅರಿತು ನಡೆಯಿರಿ: ಬಾಗಲಕೋಟೆ ಭೋವಿ ಗುರುಪೀಠದ ಜಗದ್ಗುರು ಆಶೀರ್ವಚನ

    ಕೊಪ್ಪಳ: ಜಯಂತಿ ಎಂದರೆ ಜಾತ್ರೆಯಲ್ಲ. ಅದೊಂದು ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಎಂದು ಬಾಗಲಕೋಟೆ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

    ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಆಶೀರ್ವಚನ ನೀಡಿದರು. ಕಾಯಕ ದೇವರಿದ್ದಂತೆ. ಸಮುದಾಯ ಅದನ್ನು ಮಾಡುತ್ತ ಬಂದಿದೆ. ಮನೆ, ಮಠ, ಮಂದಿರ, ಮಹಲುಗಳನ್ನು ಕಟ್ಟಿರುವ ಭೋವಿ ಸಮುದಾಯವು ಸಮಾಜದ ಎಲ್ಲ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದೆ. ಸಿದ್ಧರಾಮೇಶ್ವರರು 64 ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡಿದ್ದರು. ಅಂಥ ಮಹನೀಯರನ್ನು ನಾವು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.

    ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಮಾತನಾಡಿ, ಸಿದ್ಧರಾಮೇಶ್ವರರು ಬಸವಣ್ಣರವರನ್ನೇ ತಂದೆ, ತಾಯಿ, ಬಂಧು, ಬಸವಾದಿ ಎಂದು ಸ್ಮರಿಸಿಕೊಂಡಿದ್ದರು. ಬಸವಣ್ಣನವರ ಆಶಯದಂತೆ ನಡೆದ ಸಿದ್ಧರಾಮೇಶ್ವರರು ಸಮಾಜದ ಏಕತೆಗಾಗಿ ಶ್ರಮಿಸಿದ್ದಾರೆ. ಧರ್ಮ ಎಂದರೆ ಸಹಜವಾಗಿ ಬದುಕುವುದು ಎಂಬುವುದನ್ನು ಸಾರಿದ ಯೋಗಿಗಳು. ಇವರು ಮನುಕುಲಕ್ಕೆ ಸೀಮಿತರಾಗಿದ್ದಾರೆ. ಸಿದ್ಧರಾಮೇಶ್ವರ ಅವರ ತತ್ವಾದರ್ಶಗಳು, ವಿಚಾರಗಳು, ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿದರು. ನಗರದ ಗವಿಸಿದ್ಧೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಸಿದ್ಧರಾಮೇಶ್ವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಎಡಿಸಿ ಸಾವಿತ್ರಿ ಕಡಿ, ನಗರಸಭೆ ಸದಸ್ಯರಾದ ಅಕ್ಬರಪಾಷಾ, ವಿರೂಪಾಕ್ಷಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಸಮುದಾಯ ಮುಖಂಡರಾದ ನಿಂಗಪ್ಪ ವಡ್ಡರ್, ಬಸವರಾಜ ಭೋವಿ, ರಾಮಣ್ಣ ವಡ್ಡರ್, ಗಾಳೆಪ್ಪ ಭೋವಿ, ವೆಂಕಟೇಶ ಕಂಪಸಾಗರ, ತಿಮ್ಮಣ್ಣ ಗುನ್ನಾಳ, ಪರಶುರಾಮ ತಾವರಗೇರಾ, ಉಡುಚಪ್ಪ, ಲಕ್ಷ್ಮಣ ತಳಕಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts