More

    ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ, ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

    ಕೊಪ್ಪಳ: ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ತಾಲೂಕಿನ ಚಿಕ್ಕ ಬೊಮ್ಮನಾಳ, ಹಿರೇಸೂಳಿಕೇರಿ, ಹಾಸಗಲ್ ಗ್ರಾಮಗಳಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

    ಕೊಪ್ಪಳ ಭಾಗದ ಗ್ರಾಮಗಳಲ್ಲಿ ರಸ್ತೆ, ಚರಂಡಿ ಸೇರಿ ಇತರ ಕಾಮಗಾರಿ ನಿರ್ಮಿಸಲು ಬಹುದಿನದಿಂದ ಬೇಡಿಕೆ ಹಿನ್ನೆಲೆ 2.90 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಬದ್ಧವಾಗಿದ್ದು, ಕಳಪೆ ಕಾಮಗಾರಿ ನಡೆದರೆ ಸಹಿಸುವುದಿಲ್ಲ. ಜನರ ಅಪೇಕ್ಷೆಯಂತೆ ಗುಣಮಟ್ಟದ ಕಾಮಗಾರಿ ನಡೆಸಿ. ಕ್ರಿಯಾ ಯೋಜನೆಯಂತೆ ಕೆಲಸ ನಿರ್ವಹಿಸಿ. ಯಾವುದರಲ್ಲೂ ಲೋಪವಾಗಬಾರದು. ಜನರೂ ಅಭಿವೃದ್ಧಿ ಕಾಮಗಾರಿಗಳಿಗೆ ಕೈ ಜೋಡಿಸಬೇಕು. ಕೆಲಸ ನಿರ್ವಹಣೆ ವೇಳೆ ಸಹಕಾರ ನೀಡಬೇಕು. ಗ್ರಾಮಸ್ಥರು ಸಲ್ಲಿಸುವ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

    ಚಿಕ್ಕ ಬೊಮ್ಮನಾಳದಲ್ಲಿ 90 ಲಕ್ಷ ರೂ., ಹಿರೇ ಸೂಳಿಕೇರಿ 40 ಲಕ್ಷ ರೂ., ಹಾಸಗಲ್ 1ಕೋಟಿ ರೂ., ಹನುಮನಟ್ಟಿ ಗ್ರಾಮದಲ್ಲಿ 60 ಲಕ್ಷ ರೂ. ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ತಾಪಂ ಮಾಜಿ ಸದಸ್ಯ ಹನಮಗೌಡ ಚಳ್ಳಾರಿ, ಗ್ರಾಪಂ ಸದಸ್ಯರಾದ ಹನುಮಂತಪ್ಪ ಗುಳೇದ್, ಮಲ್ಲಿಕಾರ್ಜುನ, ಮುಖಂಡರಾದ ಮಂಜುನಾಥ ಗೋದಿ, ಮಾರುತಿ ಸಂಕಟಿ, ಶರಣಪ್ಪ ಕಾಸನಕಡ್ಡಿ, ಸಂಗಪ್ಪ ವಕ್ರದ್, ಹನುಮಂತಪ್ಪ ಚೌವ್ಹಾಣ್, ವಿರೂಪಾಕ್ಷಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts