More

    ಗವಿಸಿದ್ಧೇಶ್ವರ ಜಾತ್ರೆಗೆ ಭರದ ಸಿದ್ಧತೆ: ದಾಸೋಹ ಮಂಟಪ, ರಥ ಬೀದಿ ಸ್ವಚ್ಛತೆ

    ಕೊಪ್ಪಳ: ಉತ್ತರ ಕರ್ನಾಟಕದ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಗವಿಮಠ ಜಾತ್ರೆಗೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಮೈದಾನ ಸ್ವಚ್ಛತೆ, ಮಹಾ ಪ್ರಸಾದ ವ್ಯವಸ್ಥೆಗಾಗಿ ದಾಸೋಹ ಮಂಟಪ ಸಿಂಗಾರಗೊಳ್ಳುತ್ತಿದೆ.

    ಮುಂದಿನ ವರ್ಷ ಜ.8ರಂದು ಮಹಾ ರಥೋತ್ಸವ ನಡೆಯಲಿದ್ದು, ರಥ ಬೀದಿ, ಅಂಗಡಿಗಳನ್ನು ಆರಂಭಿಸಲು ಮೈದಾನ ಸಿದ್ಧಪಡಿಸಲಾಗುತ್ತಿದೆ. ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಮಠ ಸಂಪರ್ಕಿಸುವ ವಿವಿಧ ರಸ್ತೆಗಳ ಸ್ವಚ್ಛತೆ, ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಮಠದ ಮುಂಭಾಗದ ನೀರಿನ ಟ್ಯಾಂಕ್, ಕೆರೆ, ಮಠದ ಹೊರ, ಒಳ ಭಾಗಗಳಲ್ಲಿ ಲೈಟಿಂಗ್ ಅಳವಡಿಸುತ್ತಿದ್ದು, ಅಂದ ಹೆಚ್ಚಿಸುತ್ತಿವೆ.

    ಬೆಟ್ಟಕ್ಕೆ ಹೊಂದಿಕೊಂಡಿರುವ ಮಲಿಯಮ್ಮ ದೇವಿ ದೇವಸ್ಥಾನದ ಬಳಿಯ ಐದು ಎಕರೆ ವಿಶಾಲ ಮೈದಾನದಲ್ಲಿ ದಾಸೋಹ ಮಂಟಪ ಸಿದ್ಧಗೊಳಿಸಲಾಗುತ್ತಿದೆ. ರಥೋತ್ಸವ ದಿನದಂದು ಸಂಜೆಯಿಂದ ಪ್ರಸಾದ ಸೇವೆ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಪ್ರಸಾದ ಸವಿಯಲಿದ್ದಾರೆ. ಭವ್ಯ ಅಡುಗೆ ಮನೆ, ಒಲೆಗಳು, 65 ಅಡಿ ಎತ್ತರದ ಅನ್ನ ಸಂಗ್ರಹಣಾ ಕಟ್ಟೆಗಳು, ಸಾಂಬರ್ ತಯಾರಿಸುವ ದೊಡ್ಡ ಕೊಪ್ಪರಿಕೆಗಳನ್ನು ಸಿದ್ಧಗೊಳಿಸಲಾಗಿದೆ. ಅಡುಗೆ ಭಟ್ಟರು ತಂಗಲು ತಾತ್ಕಾಲಿಕ ಕೋಣೆಗಳು, ದವಸ-ಧಾನ್ಯ, ತರಕಾರಿ, ಹಾಲು, ಮೊಸರು, ತುಪ್ಪ ಇತ್ಯಾದಿ ವಸ್ತುಗಳ ಹಾಗೂ ಸ್ವಚ್ಛತಾ ಪರಿಕರಗಳ ಸಂಗ್ರಹಣಾ ಕೊಠಡಿಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿದೆ. ಪುರುಷ, ಮಹಿಳಾ, ಅಂಗವಿಕಲ, ವೃದ್ಧರಿಗಾಗಿ ಪ್ರತ್ಯೇಕ ಊಟದ ಕೌಂಟರ್ ರಚಿಸಲಾಗುತ್ತಿದೆ.

    ಫ್ಲೆಕ್ಸ್ ಹಾಕದಂತೆ ಮನವಿ: ಗವಿಮಠ ಜಾತ್ರೆ ಅಂಗವಾಗಿ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ಸ್ಥಳಾವಕಾಶ ಕಲ್ಪಿಸಬೇಕು. ಹೀಗಾಗಿ ಶುಭ ಕೋರುವ ಫ್ಲೆಕ್ಸ್ , ಕಟೌಟ್ ಅಳವಡಿಸದಂತೆ ಗವಿಮಠದ ಆಡಳಿತ ಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕೊಪ್ಪಳ ನಗರ, ಜಾತ್ರೆ ಆವರಣ ಸೇರಿ ಎಲ್ಲಿಯೂ ಫ್ಲೆಕ್ಸ್ ಹಾಕದೆ ಶಿಸ್ತು ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.

    ಗವಿಸಿದ್ಧೇಶ್ವರ ಜಾತ್ರೆಗೆ ಭರದ ಸಿದ್ಧತೆ: ದಾಸೋಹ ಮಂಟಪ, ರಥ ಬೀದಿ ಸ್ವಚ್ಛತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts