More

    ಗವಿಮಠ ಜಾತ್ರೆ; ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ

    ಕೊಪ್ಪಳ: ಗವಿಮಠ ಜಾತ್ರೆ ಅಂಗವಾಗಿ ವಿವಿಧ ಕ್ರೀಡೆ, ಕರಾಟೆ, ದಾಲಪಟ, ಸಾಹಸ ಪ್ರದರ್ಶನಗಳ ಜತೆಗೆ ಈ ವರ್ಷ ವಿಶೇಷವಾಗಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.

    2023ರ ಜ.8, 9 ಮತ್ತು 10 ಮೂರು ದಿನ ನಡೆಯುವ ಅಜ್ಜನ ಜಾತ್ರೆಯಲ್ಲಿ ತೆಗೆದ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ಛಾಯಾಚಿತ್ರಗಳಿಗೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 10,001 ರೂ., ದ್ವಿತೀಯ 7,501 ರೂ., ತೃತೀಯ 5,001 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಇಬ್ಬರಿಗೆ 1001ರೂ. ಸಮಾಧಾನಕರ ಬಹುಮಾನ ವಿತರಿಸಲಾಗುವುದು. ಸ್ಪರ್ಧೆಗೆ ವಯಸ್ಸಿನ ಮಿತಿ ಇಲ್ಲ. ನೋಂದಣಿ ಮಾಡಿಕೊಂಡ ಛಾಯಾಗ್ರಾಹಕರಿಗೆ ಮೂರು ದಿನ ಊಟ, ವಸತಿ ವ್ಯವಸ್ಥೆ ಇರಲಿದೆ. ಆಯ್ಕೆಯಾದ ಚಿತ್ರಗಳನ್ನು ಫಲಿತಾಂಶ ಪ್ರಕಟಣೆ ದಿನ ಪ್ರದರ್ಶನಕ್ಕೆ ಇಡಲಾಗುವುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗೆ ಸತೀಶ್ ಮುರಾಳ-9916332447, ನಾಭೀರಾಜ ದಸ್ತೇನವರ-9448695067, ರವಿ ಪಟವಾರಿ-8095777091 ಇವರನ್ನು ಸಂಪರ್ಕಿಸುವಂತೆ ಗವಿಮಠ ಕೋರಿದೆ.

    ಭದ್ರತೆ ಒದಗಿಸಲು ಸೂಚನೆ: ಗವಿಸಿದ್ಧೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದ್ದಾರೆ. ಅಗತ್ಯ ಇರುವಲ್ಲಿ ಸಿಸಿ ಟಿವಿ ಕ್ಯಾಮರಾ ಅಳಡಿಸಬೇಕು. ಜಾತ್ರಾ ಸ್ಥಳದಲ್ಲಿ 3 ಔಟ್ ಪೊಲೀಸ್ ಸ್ಟೇಷನ್ ನಿರ್ಮಿಸಬೇಕು. ರಥೋತ್ಸವಕ್ಕೆ ಆಗಮಿಸುವ ವೃದ್ಧರು, ಅಂಗವಿಕಲರಿಗೆ ಪಾರ್ಕಿಂಗ್ ಸ್ಥಳದಿಂದ ರಥೋತ್ಸವ ಸ್ಥಳಕ್ಕೆ ಸುಸಜ್ಜಿತ ಮತ್ತು ಪರವಾನಗಿ ಹೊಂದಿದ ಆಟೋಗಳ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆ ಆವರಣದಲ್ಲಿ ಗವಿಮಠದಿಂದ ನೀಡುವ ಲೇಬಲ್ ಅಂಟಿಸಿದ ಆಟೋಗಳ ಓಡಾಟಕ್ಕೆ ಅನುಮತಿ ನೀಡಬೇಕು. ವಾಹನ ಪಾರ್ಕಿಂಗ್ ಸ್ಥಳದ ಕುರಿತು ಬ್ಯಾನರ್ ಅಳವಡಿಸಬೇಕು. ವಾಹನ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಪೊಲೀಸ್, ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಬೇಕು. ವಿಶೇಷ ಆಹ್ವಾನಿತರನ್ನು ಕರೆ ತರಲು ಭದ್ರತೆ ನೀಡುವಂತೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts