More

    ಎರಡನೇ ಹಂತದ ಚುನಾವಣೆ ಹಣಾಹಣಿಗೆ ಜಿಲ್ಲಾಡಳಿತ ಸಿದ್ಧತೆ

    ಕೊಪ್ಪಳ: ಗ್ರಾಮ ಪಂಚಾಯಿತಿ ಎರಡನೇ ಹಂತದ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

    ಗಂಗಾವತಿ ತಾಲೂಕಿನ 18, ಕನಕಗಿರಿ 10, ಕಾರಟಗಿ 11 ಮತ್ತು ಕುಷ್ಟಗಿ ತಾಲೂಕಿನ 36 ಗ್ರಾಪಂಗೆ ಎರಡನೇ ಹಂತದ ಚುನಾವಣೆಯ ಮತದಾನ ಇಂದು ನಡೆಯಲಿದೆ. 1,375 ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು, ಇದರಲ್ಲಿ 169 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಮತದಾನ ನಡೆಯಲಿದ್ದು, 3095 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮತದಾನಕ್ಕಾಗಿ ಗಂಗಾವತಿ ತಾಲೂಕಿನಲ್ಲಿ 156, ಕಾರಟಗಿ 87, ಕನಕಗಿರಿ 67 ಮತ್ತು ಕುಷ್ಟಗಿ ತಾಲೂಕಿನಲ್ಲಿ 282 ಸೇರಿ 592 ಮತಗಟ್ಟೆ ಸಿದ್ಧಗೊಳಿಸಲಾಗಿದೆ. ನಾಲ್ಕು ತಾಲೂಕುಗಳಲ್ಲಿ 3,92,317ಮತದಾರರು ಮತ ಚಲಾಯಿಸಲಿದ್ದಾರೆ. ಗಂಗಾವತಿ ತಾಲೂಕಿನಲ್ಲಿ 1,02,175, ಕಾರಟಗಿ 57,742, ಕನಕಗಿರಿ 44,338 ಹಾಗೂ ಕುಷ್ಟಗಿ ತಾಲೂಕಿನಲ್ಲಿ 1,88,062 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

    ಮತದಾನ ಕಾರ್ಯ ಸುಗಮವಾಗಿ ಜರುಗಲು ಮತಗಟ್ಟೆ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು, ಡಿ ದರ್ಜೆ ನೌಕರ ಸೇರಿ 2,960 ಸಿಬ್ಬಂದಿ ನೇಮಿಸಲಾಗಿದೆ. ಗಂಗಾವತಿ ತಾಲೂಕಿನಲ್ಲಿ 191 ಪ್ರಿಸೈಡಿಂಗ್ ಆಫೀಸರ್, 191 ಒಂದನೇ ಪೋಲಿಂಗ್ ಅಧಿಕಾರಿ, 191 ಎರಡನೇ ಪೋಲಿಂಗ್, 191 ಮೂರನೇ ಪೋಲಿಂಗ್ ಅಧಿಕಾರಿ, 159 ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ಕಾರಟಗಿ ತಾಲೂಕಿನಲ್ಲಿ 116 ಪ್ರಿಸೈಡಿಂಗ್ ಅಧಿಕಾರಿ, 116 ಮೊದಲನೆ ಪೋಲಿಂಗ್ ಅಧಿಕಾರಿ, 116 ಎರಡನೇ ಪೋಲಿಂಗ್, 116 ಮೂರನೇ ಪೋಲಿಂಗ್ ಅಧಿಕಾರಿಗಳು, 97 ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ಕನಕಗಿರಿ ತಾಲೂಕಿನಲ್ಲಿ 107 ಪ್ರಿಸೈಡಿಂಗ್ ಅಧಿಕಾರಿಗಳು, 107 ಮೊದಲನೆ ಪೋಲಿಂಗ್, 107 ಎರಡನೇ ಪೋಲಿಂಗ್, 107 ಮೂರನೇ ಪೋಲಿಂಗ್ ಅಧಿಕಾರಿಗಳು ಮತ್ತು 89 ಡಿ ದರ್ಜೆ ನೌಕರರನ್ನು ನೇಮಿಸಲಾಗಿದೆ. ಕುಷ್ಟಗಿ ತಾಲೂಕಿನಲ್ಲಿ 360 ಪ್ರಿಸೈಡಿಂಗ್, 360 ಮೊದಲನೇ ಪೋಲಿಂಗ್, 360 ಎರಡನೇ ಪೋಲಿಂಗ್, 360 ಮೂರನೇ ಪೋಲಿಂಗ್ ಅಧಿಕಾರಿಗಳು ಮತ್ತು 300 ಡಿ ದರ್ಜೆ ನೌಕರರು ಸೇರಿ ಒಟ್ಟು 1,461 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts