More

    ಕ್ರಾಂತಿಕಾರಿಗಳ ವಿಚಾರಧಾರೆ ಅರಿಯಿರಿ

    ಕೊಪ್ಪಳ: ಕ್ರಾಂತಿಕಾರಿಗಳ ವಿಚಾರಧಾರೆಗಳನ್ನು ಅರಿಯಬೇಕು. ಅವರಿಗೆ ಸಂಬಂಧಿಸಿದ ಅನೇಕ ಪುಸ್ತಕಗಳಿದ್ದು, ಅವುಗಳನ್ನು ಅಧ್ಯಯನ ಮಾಡಬೇಕು ಎಂದು ಎಸ್‌ಯುಸಿಐ ರಾಜ್ಯ ಸಮಿತಿ ಸದಸ್ಯ ರಾಮಾಂಜಿನಪ್ಪ ಆಲದಳ್ಳಿ ಹೇಳಿದರು.

    ನಗರದ ಎಸ್‌ಯುಸಿಐ ಕಚೇರಿಯಲ್ಲಿ ಲೆನಿನ್ ಸ್ಮರಣಾರ್ಥ ಭಾನುವಾರ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಮಿಕ ವರ್ಗದ ಮಹಾನ್ ನಾಯಕ ಕಾಮ್ರೆಡ್ ಲೆನಿನ್ ಮರಣ ಶತಾಬ್ದಿ ಸಂದರ್ಭ ನಮಗೆಲ್ಲ ಸ್ಮರಣೀಯ ದಿನ. ಅಪ್ರತಿಮ ಮಾಕ್ಸ್ ರ್ ವಾದಿ ಚಿಂತಕ ಶಿವದಾಸ್ ಘೋಷ್ ಅವರ ವಿಚಾರಧಾರೆ, ಭಾಷಣ ತುಣುಕುಗಳನ್ನು ಸಂಗ್ರಹಿಸಿ ಭಾಷಾಂತರ ಮಾಡಿದ ಹಲವು ಪುಸ್ತಕಗಳನ್ನು ರಾಜ್ಯ ಸಮಿತಿ ಹೊರತಂದಿದೆ.

    ಹಲವಾರು ಪುಸ್ತಕಗಳನ್ನು ರಾಜ್ಯದ ಎಡವಾದಿ ಚಿಂತನೆ ಬೆಂಬಲಿಗರು, ಮಧ್ಯಮ ವರ್ಗ ಹಾಗೂ ಕಾರ್ಮಿಕವರ್ಗದ ಜನರು ಬೆಂಬಲಿಸಿದ್ದಾರೆ. ಹಾಗೆಯೇ ಈ ಹೊಸ ಪುಸ್ತಕಗಳಲ್ಲಿನ ಕಾಮ್ರೆಡ್ ಶಿವದಾಸ್ ಘೋಷ್ ವಿಚಾರಗಳು ನಮ್ಮ ಹೋರಾಟ ಮುನ್ನಡೆಸಲು ಸಹಾಯಕಾರಿಯಾಗಲಿವೆ ಎಂದರು.

    ನಮ್ಮ ಪಕ್ಷದ ಸದಸ್ಯರು, ಹಿತೈಸಿಗಳು, ಬೆಂಬಲಿಗರು ಹಾಗೂ ಕಾರ್ಮಿಕ ವರ್ಗದ ಎಲ್ಲ ಜನತೆ ಪುಸ್ತಕಗಳನ್ನು ಖರೀದಿಸಿ. ಅದರಲ್ಲಿನ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಫ್ಯಾಸಿಸ್ಟ್ ಶಕ್ತಿಗಳು ವಿಜೃಂಭಿಸುತ್ತಿರುವ ಈ ಸನ್ನಿವೇಶದಲ್ಲಿ ಅವರ ವಿರುದ್ಧ ಹೋರಾಡಲು ಪುಸ್ತಕಗಳು ಅಸ್ತ್ರವಾಗಲಿವೆ. ನಮ್ಮ ವಿಚಾರಗಳನ್ನು ಎಲ್ಲರೂ ತಿಳಿಸಿ. ಮುಂದಿನ ಜನ ಚಳವಳಿಯನ್ನು ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು.

    ಪಕ್ಷದ ರಾಜ್ಯ ಮುಖಂಡ ಶರಣಪ್ಪ ಉದ್ಬಾಳ್, ಜಿಲ್ಲಾ ಮುಖಂಡರಾದ ಶರಣು ಗಡ್ಡಿ, ರಮೇಶ್, ವಿಜಯಲಕ್ಷ್ಮೀ, ಗಂಗರಾಜ್, ಶಾರದಾ, ದೇವರಾಜ್, ಮಂಜುಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts