More

    ಶಾಸನಬದ್ಧ ಸವಲತ್ತು ನೀಡಿ: ಕೊಪ್ಪಳ ಡಿಸಿ ಕಚೇರಿ ಮುಂದೆ ಅಂಗನವಾಡಿ ನೌಕರರ ಪ್ರತಿಭಟನೆ

    ಕೊಪ್ಪಳ: ಗ್ರಾಚ್ಯುಟಿ ಸೇರಿ ಇತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಅಂಗನವಾಡಿ ನೌಕರರಿಗೆ ಗೌರವ ಧನ ಪಾವತಿ ಮಾಡಿದರೂ, ವೇತನ ರೂಪ ಹೊಂದಿದೆ. ಇದು ಪೂರ್ಣ ಪ್ರಮಾಣದ ಕೆಲಸ. ಹೀಗಾಗಿ ಗ್ರಾಚ್ಯುಟಿಗೆ ನಾವು ಅರ್ಹರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ತೀರ್ಪು ಮಾನ್ಯ ಮಾಡಿ ಸೂಕ್ತ ಆದೇಶ ಹೊರಡಿಸುತ್ತಿಲ್ಲ. ಕೇಂದ್ರ ಸರ್ಕಾರ ಕಳೆದ ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿದ್ದು, ನಮ್ಮ ಮೇಲಿನ ದಬ್ಬಾಳಿಕೆ ಹೆಚ್ಚಲು ಕಾರಣವಾಗಿದೆ. ಐಸಿಡಿಎಸ್ ಯೋಜನೆ ಆರಂಭವಾಗಿ 48 ವರ್ಷವಾಗಿದ್ದರೂ ನಮ್ಮನ್ನು ಕಾಯಂ ನೌಕರರೆಂದು ಪರಿಗಣಿಸಿಲ್ಲ. ಮೂರ‌್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಿದ್ದಾರೆಂದು ಆರೋಪಿಸಿದರು.

    ಕನಿಷ್ಠ 26 ಸಾವಿರ ರೂ. ವೇತನ ಪಾವತಿಸಬೇಕು. 10 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಕೇಂದ್ರ ಸರ್ಕಾರ ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಿಸಬೇಕು. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯಕ್ಕೆ ಬರಬೇಕಾದ ಅನುದಾನ ಸಕಾಲಕ್ಕೆ ಬಿಡುಗಡೆ ಮಾಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಜು.26ರಿಂದ ಪಾರ್ಲಿಮೆಂಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸಂಘಟನೆ ಪದಾಧಿಕಾರಿಗಳಾದ ಕಲಾವತಿ ಮೇಣದಾಳ, ಗಿರಿಜಾ ದರೋಜಿ, ಲಲಿತಾ ಡಂಬಳ, ಅನ್ನಪೂರ್ಣ ಬೃಹನ್ಮಠ, ಶಿವಲೀಲಾ , ಅಮರಮ್ಮ, ಪದ್ಮಾ ಸಜ್ಜನ, ಅನಸೂಯಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts