More

    ಖಾತ್ರಿ ಕಾಮಗಾರಿಯಲ್ಲಿ ಜಾತಿ ಬೇಡ ; ವಿವಿಧ ಸಂಘಟನೆಗಳಿಂದ ಪ್ರತಿಭಟನೆ

    ಕೊಪ್ಪಳ: ಜಾತಿ ಆಧರಿಸಿ ನರೇಗಾ ಕಾಮಗಾರಿ ಅನುಷ್ಠಾನ, ಕೂಲಿ ಪಾವತಿ ಮಾಡುವುದು ಬೇಡವೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ, ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘ ಹಾಗೂ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಎಸ್‌ಸಿ, ಎಸ್‌ಟಿ ಹಾಗೂ ಇತರ ವರ್ಗದವರಿಗೆ ನರೇಗಾ ಕೂಲಿ ಪಾವತಿ ಮಾಡುವ ಕುರಿತು ರಾಜ್ಯ ಸರ್ಕಾರಗಳಿಗೆ ಕೆಲ ಸಲಹೆ ನೀಡಿದೆ. ಕೆಲಸ ಹಾಗೂ ಕೂಲಿ ಪಾವತಿ ವಿಚಾರದಲ್ಲಿಯೂ ಜಾತಿ ಪದ್ಧತಿ ಸರಿಯಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದರ ಮೇಲೆ ಸರ್ಕಾರದ ಆದೇಶ ಪರಿಣಾಮ ಬೀರಲಿದೆ. ಇದರಿಂದ ಕೆಲಸ ನೀಡುವುದು ಹಾಗೂ ಕೂಲಿ ಪಾವತಿ ವಿಳಂಬವಾಗಲಿದೆ. ಕೆಲಸಗಾರರನ್ನು ಜಾತಿ ಆಧಾರದಲ್ಲಿ ವಿಂಗಡಿಸುವುದು ಕಾಯ್ದೆ ಉಲ್ಲಂಘನೆಯಾಗಲಿದೆ.

    ಇದರಿಂದಾಗಿ ನರೇಗಾ ಕಾಮಗಾರಿ ಹಾಗೂ ಕೂಲಿ ಪಾವತಿಯನ್ನು ಜಾತಿ ಆಧಾರದಲ್ಲಿ ನಿರ್ಧರಿಸಬಾರದು. ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಬೇಕು. ದಿನಗೂಲಿ ಮೊತ್ತವನ್ನು 600 ರೂ.ಗೆ ಏರಿಸಬೇಕೆಂದು ಒತ್ತಾಯಿಸಿದರು. ಎಐಎಡಬ್ಲೂೃಯು ರಾಜ್ಯ ಉಪಾಧ್ಯಕ್ಷ ಎಚ್.ಗಂಗಾಧರಯ್ಯ ಸ್ವಾಮಿ, ಜಿಲ್ಲಾ ಅಧ್ಯಕ್ಷ ಬಸವರಾಜ ಮರಕುಂಬಿ, ಕಾರ್ಯದರ್ಶಿ ಸುಂಕಪ್ಪ ಗದಗ, ಸದಸ್ಯರಾದ ಅಂದಪ್ಪ ಬರದೂರ, ಬಾಳಪ್ಪ ಹುಲಿಹೈದರ್, ಕೆ.ಹುಸೇನಪ್ಪ, ಡಿಎಚ್‌ಎಸ್ ಪದಾಧಿಕಾರಿಗಳಾದ ರಮೇಶ ಬಡಗಿ, ಮರಿನಾಗಪ್ಪ ಡಗ್ಗಿ, ನಿಂಗಪ್ಪ ಹಳ್ಳಿ, ಜಿ.ಹುಲಿಗೆಮ್ಮ, ಮರಿಯವ್ವ ಹಾಲಹಳ್ಳಿ, ಗಾಳೆಮ್ಮ ಗುಂಡನವರ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts