More

    ಕೋಮು ಪ್ರಚೋದನೆ ಸಿದ್ದರಾಮಯ್ಯ ಕಾರಣ

    ಕೊಪ್ಪಳ: ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಣೆ ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ಕೋಮು ಪ್ರಚೋದನೆ ಅವಕಾಶ ಮಾಡಿಕೊಟ್ಟರು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

    ಮುಸ್ಲಿಮರಲ್ಲಿ ವ್ಯಕ್ತಿ ಪೂಜೆ ಇಲ್ಲ. ಯಾವ ಮುಸ್ಲಿಮರೂ ಟಿಪ್ಪು ಜಯಂತಿ ಕೇಳಿರಲಿಲ್ಲ. ಆದರೂ ಜಯಂತಿ ಆಚರಿಸಿದರು ಬುಧಬಾರ ಸುದ್ದಿಗೋಷ್ಠಿಯಲ್ಲಿ ಆಚರಿಸಿದರು.
    ವೀರಶೈವ ಲಿಂಗಾಯತರನ್ನು ಒಡೆಯಲು ಯತ್ನಿಸಿದರು. ಶಾಲಾ ಮಕ್ಕಳಲ್ಲಿ ಜಾತಿ ತಂದರು. ಕೇವಲ ಒಂದು ವರ್ಗಕ್ಕೆ ಶಾದಿ ಭಾಗ್ಯ ಕೊಟ್ಟರು. ಯಾಕೆ ಅವರದೇ ಸಮುದಾಯ ಅಥವಾ ಇತರ ಸಮುದಾಯಗಳಲ್ಲಿ ಬಡ ಜನರು ಇಲ್ಲವಾ ? ಅವರಿಗೇಕೆ ನೀಡಲಿಲ್ಲ. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದರು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದ್ದಕ್ಕೆ ಕೋಮು ಪ್ರಚೋದನೆ ಹೆಚ್ಚಿದ್ದು. ನಾವದನ್ನು ತಿಳಿ ಮಾಡುತ್ತಿದ್ದೇವೆ ಎಂದರು.

    ಸಚಿವ ಅಶ್ವತ್ಥ ನಾರಾಯಣ ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಮುಗಿಸಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷಗಳಿಗೆ ಅವರದೇ ಆದ ಸಿದ್ಧಾಂತಗಳಿವೆ. ಅದಕ್ಕೆ ತಕ್ಕಂತೆ ಮಾತನಾಡಬೇಕು. ಯಾರೇ ಆಗಲಿ ಕೊಲ್ಲುವ ಮಾತಾಡಬಾರದು. ಯಾರೂ ಅದನ್ನು ಒಪ್ಪುವುದಿಲ್ಲ. ಇದು ನಮ್ಮ ಪಕ್ಷದ ಸಿದ್ಧಾಂತ ಅಲ್ಲ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವುದು ವಿವಾದ ಆಗಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts