More

    ಕರೊನಾ ಕಟ್ಟೆಚ್ಚರದ ನಡುವೆ ಬಣ್ಣದಾಟ: ಜಿಲ್ಲೆಯಲ್ಲಿ ಸಂಭ್ರಮದ ಹೋಳಿ

    ಕೊಪ್ಪಳ: ಜಿಲ್ಲೆಯ ವಿವಿಧೆಡೆ ಭಾನುವಾರ ಹೋಳಿ ಹಬ್ಬದ ಸಂಭ್ರಮ ಕಂಡುಬಂತು. ಯುವಕರು, ಚಿಣ್ಣರು, ಮಹಿಳೆಯರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

    ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಗುಂಪು ಸೇರಲು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಕಾಮದಹನ ಮಾಡದಂತೆಯೂ ಸೂಚಿಸಿದೆ. ಇದರಿಂದಾಗಿ ಹೋಳಿ ಆಚರಣೆಯಲ್ಲಿ ಎಂದಿನ ಸಡಗರ ಇರದಿದ್ದರೂ ಜನರು ಅಲ್ಲಲ್ಲಿ ಗುಂಪು ಸೇರಿ ಓಕುಳಿ ಆಡಿದರು. ನಗರದ ಅಶೋಕ ವೃತ್ತ, ಜವಾಹರ ರಸ್ತೆ, ಗಡಿಯಾರ ಕಂಬ, ಭಾಗ್ಯನಗರದ ಪ್ರಮುಖ ರಸ್ತೆಗಳಲ್ಲಿ ಯುವಕರು ಪರಸ್ಪರ ಬಣ್ಣ ಹಚ್ಚಿಕೊಂಡರು. ಮಹಿಳೆಯರು, ಮಕ್ಕಳು ಮನೆಯಂಗಳದಲ್ಲಿ ಬಣ್ಣ ಹಚ್ಚಿಕೊಂಡು ಕುಣಿದಾಡಿದರು. ಚಿಣ್ಣರು ಬಾಯಿ ಬಡಿದುಕೊಳ್ಳುವ ಮೂಲಕ ಹಬ್ಬದ ಖುಷಿ ಅನುಭವಿಸಿದರು.

    ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚು ಜನರು ಸೇರದಂತೆ ಪೊಲೀಸರು ನಿಗಾ ವಹಿಸಿದ್ದರು. ಗುಂಪು ಸೇರುತ್ತಿದ್ದ ಬೈಕ್ ಸವಾರರನ್ನು ವಾಪಸ್ ಕಳುಹಿಸಿದರು. ಶನಿವಾರ ತಡರಾತ್ರಿ ನಗರದ ಪ್ರಮುಖ ಸ್ಥಳಗಳಲ್ಲಿ ಕಾಮಣ್ಣನ ದಹನ ಮಾಡಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆ ಮುಂದೆ ಒಲೆ ಹೂಡಿ ಶೇಂಗಾ, ಕಡಲೆ ಹುರಿದು ತಿಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts