More

    ಸರ್ಕಾರಿ ಸೇವೆ ಸಕಾಲದಲ್ಲಿ ತಲುಪಿಸಿ; ಡಿಸಿ ಸುಂದರೇಶ ಬಾಬು ಸೂಚನೆ

    ಕೊಪ್ಪಳ: ಭೂಮಿ ತಂತ್ರಾಂಶ ಸಮಪರ್ಕ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ವಿಷಯ ನಿರ್ವಾಹಕರು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಸೂಚಿಸಿದರು.

    ಇದನ್ನೂ ಓದಿರಿ: ಶಾಸಕರ ಬಳಿ ಸಹಕಾರ ಯಾಚಿಸಿದ ಸಿಎಂ

    ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಭೂಮಿ ತಂತ್ರಾಂಶ ಹಾಗೂ ಕಂದಾಯ ವಿಷಯಗಳ ಬಗ್ಗೆ ಬುಧವಾರ ಕಂದಾಯ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

    ಭೂಮಿ ತಂತ್ರಾಂಶ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ನಡೆಯುತ್ತದೆ. ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಹಾಗೂ ಕರ್ನಾಟಕ ಭೂ ನೋಂದಣಿಯಲ್ಲಿನ ಬದಲಾವಣೆಗಳನ್ನು ನಿಯಂತ್ರಿಸಲು ತಂತ್ರಾಂಶ ರಚಿಸಲಾಗಿದೆ.

    ಇದನ್ನೂ ಓದಿರಿ:ಇ-ಸ್ಟಾಂಪಿಂಗ್ ತರಬೇತಿ ಕಾರ್ಯಾಗಾರ

    ವ್ಯವಸ್ಥೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ವಿಷಯ ನಿರ್ವಾಹಕರು ಮುಂದಾಗಿ. ಸರ್ಕಾರದ ಸೇವೆಗಳು ಎಲ್ಲರಿಗೂ ಸರಿಯಾದ ಸಮಯದಲ್ಲಿ ಸಿಗಬೇಕು.

    ಹೀಗಾಗಿ ಕಾರ್ಯಗಾರ ಹಮ್ಮಿಕೊಂಡಿದ್ದು ಸದುಪಯೋಗಪಡಿಸಿಕೊಂಡು ಕರ್ತವ್ಯ ಸರಿಯಾಗಿ ನಿಭಾಯಿಸಿ ಎಂದು ತಿಳಿಸಿದರು. ಮೊದಲು ವಿಷಯ ಅರಿತು ಪರಿಹಾರ ಹುಡುಕಿ.

    ಸಕಾಲ ಯೋಜನೆಯ ಕಾರ್ಯ ತಂತ್ರಾಂಶಗಳ ನಿಯಮಗಳನ್ನು ಪಾಲನೆ ಮಾಡಿ. ಯೋಜನೆಯಲ್ಲಿ ಮೊದಲು ಸಮಯ ಪಾಲನೆ ಮಾಡುವುದನ್ನು ಕಲಿತುಕೊಳ್ಳಬೇಕು.

    ಭೂಮಿ ತಂತ್ರಾಶದ ಹಾಗೂ ಕಂದಾಯ ಸೇವೆಗಳು ಸಾರ್ವಜನಿಕರಿಗೆ ತ್ವರಿತವಾಗಿ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ತಹಸೀಲ್ದಾರರು ತಾಲೂಕು ಮಟ್ಟದಲ್ಲಿ ಪರಿಶೀಲನಾ ಸಭೆಗಳನ್ನು ನಡೆಸಿ ಕ್ರಮಕೈಗೊಳ್ಳಿ. ಗೊಂದಲಗಳಿದ್ದಲ್ಲಿ ಮುಕ್ತವಾಗಿ ಚರ್ಚಿಸಿ ಎಂದು ಸಲಹೆ ನೀಡಿದರು.

    ಎಡಿಸಿ ಸಾವಿತ್ರಿ ಕಡಿ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹಾಗೂ ಏಳು ತಾಲೂಕು ತಹಸೀಲ್ದಾರ್‌ಗಳು, ಭೂ ದಾಖಲೆ ಅಧಿಕಾರಿಗಳು, ಉಪ ತಹಸೀಲ್ದಾರ್‌ಗಳು, ಶಿರಸ್ತೇದಾರರು, ಕಂದಾಯ ನಿರೀಕ್ಷಕರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts