More

    ಬ್ಯಾಂಕ್​ ದರೋಡೆಕೋರರ ಚಾಲಕಿತನದಿಂದ ಕಂಗೆಟ್ಟ ಪೊಲೀಸರು: ಸಿಸಿಟಿವಿ ವೀಕ್ಷಿಸಿದವರಿಗೆ ಕಾದಿತ್ತು ಶಾಕ್​!

    ಕೊಪ್ಪಳ: ದರೋಡೆ, ಕಳ್ಳತನ ಸೇರಿ ಯಾವುದೇ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡುವ ಪೊಲೀಸರು ಮೊದಲು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುತ್ತಾರೆ. ಆದರೆ, ಇಲ್ಲೊಂದು ಕಡೆ ಬ್ಯಾಂಕ್ ದರೋಡೆ ಮಾಡಿರುವ ಖದೀಮರು ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್​ ಹೊತ್ತೊಯ್ದಿರುವುದು ಪೊಲೀಸರಿಗೆ ತಲೆ ನೋವಾಗಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಬೇವೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್​ಗೆ ಬುಧವಾರ ರಾತ್ರಿ ಕನ್ನ ಹಾಕಿರುವ ದರೋಡೆಕೋರರ ಗ್ಯಾಂಗ್, ಗ್ಯಾಸ್ ಕಟ್ಟರ್ ಮೂಲಕ ಬ್ಯಾಂಕ್​ನ ಕಬ್ಬಿಣದ ಶಟ್ಟರ್ ಕತ್ತರಿಸಿ ದರೋಡೆ ಮಾಡಿದೆ. ಬ್ಯಾಂಕ್​ನಲ್ಲಿದ್ದ ನಗದು, ಗ್ರಾಹಕರು ಅಡಮಾನ ಇಟ್ಟಿರುವ ಚಿನ್ನಾಭರಣ ಸೇರಿ ಬರೋಬ್ಬರಿ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದೆ.

    ಇದನ್ನೂ ಓದಿ: ಎಸಿಪಿಯ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಕಂಡು ಎಸಿಬಿ ಅಧಿಕಾರಿಗಳೇ ಶಾಕ್​…!

    ಇಂದು ಬೆಳಗ್ಗೆ ಸಾರ್ವಜನಿಕರು, ಬ್ಯಾಂಕ್ ಬಾಗಿಲು ಕತ್ತರಿಸಿರೋದನ್ನು ನೋಡಿ ಮ್ಯಾನೇಜರ್​ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ರವಿ ಪೊಲೀಸರಿಗೆ ಮಾಹಿತಿ ನೀಡಿ, ಅಧಿಕಾರಿಗಳ ಸಮೇತ ಬ್ಯಾಂಕ್​ಗೆ ಬಂದಿದ್ದಾರೆ. ಬಂದ ಕೂಡಲೇ ಸಿಸಿ ಕ್ಯಾಮೆರಾ ನೋಡಿರುವ ಪೊಲೀಸರಿಗೆ ಖದೀಮರು ಶಾಕ್ ಕೊಟ್ಟಿದ್ದಾರೆ. ದರೋಡೆಕೋರರು ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್​ ಅನ್ನೂ ಕದ್ದೊಯ್ದಿದ್ದಾರೆ.

    ಕೊಪ್ಪಳ ಜಿಲ್ಲೆಯ ಮಟ್ಟಿಗೆ ಇದು ದೊಡ್ಡ‌ ದರೋಡೆ ಪ್ರಕರಣ ಎಂದೇ ಹೇಳಬಹುದು. ಇನ್ನು ಖದೀಮರು ಪೊಲೀಸರ ತನಿಖೆಗೆ ಒಂದಷ್ಟು ಸಹಾಯ ಆಗಬಲ್ಲ ಸಿಸಿ ಕ್ಯಾಮೆರಾದ ಹಾರ್ಡ್ ಡಿಸ್ಕ್​ ಲಪಟಾಯಿಸಿರುವುದು ತನಿಖಾಧಿಕಾರಿಗಳಿಗೆ ಪ್ರಕರಣದ ಆರೋಪಿಗಳ ಪತ್ತೆ ಸವಾಲಾಗಿದೆ. (ದಿಗ್ವಿಜಯ ನ್ಯೂಸ್​)

    ಮಹಿಳೆಗೆ ಸೇರಿದ ಕಾರ್ಖಾನೆಯಲ್ಲಿತ್ತು 3 ಲಕ್ಷಕ್ಕೂ ಹೆಚ್ಚು ಕಾಂಡೋಮ್: ಭಯಾನಕ ಜಾಲ ಭೇದಿಸಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts