More

    60 ಸಾವಿರ ಜನರಿಗೆ ಲಸಿಕೆ ನೀಡಲು ಸೂಚನೆ ನೀಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸೂಚನೆ

    ಕೊಪ್ಪಳ: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಸೆ.17ರಂದು ಜಿಲ್ಲೆಯಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮ ಯಶಸ್ಸುಗೊಳಿಸಿ. ಇದಕ್ಕಾಗಿ ಯೋಜನೆ ರೂಪಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಸಿಕಾ ಮೇಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕು. ಕಕ ಮಹೋತ್ಸವ ಅಂಗವಾಗಿ 60 ಸಾವಿರ ಜನರಿಗೆ ಲಸಿಕೆ ನೀಡಬೇಕು. ವಾರ್ಡ್, ಗ್ರಾಮವಾರು ಮೈಕ್ರೋ ಯೋಜನೆ ರೂಪಿಸಲಾಗಿದೆ. ಕೆಲ ಗ್ರಾಮಗಳಲ್ಲಿ ಜನರು ಲಸಿಕೆ ವಿರೋಧಿಸುತ್ತಿದ್ದರೆ. ಅವರನ್ನು ತಹಸೀಲ್ದಾರ್, ತಾಪಂ ಇಒ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಮನವೊಲಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಜನರ ಪ್ರಮಾಣ ಪತ್ರ ಪರಿಶೀಲಿಸಿ, ಲಸಿಕೆ ಪಡೆಯದಿದ್ದಲ್ಲಿ ನೀಡಿ. ಬಸ್‌ನಿಲ್ದಾಣ, ಡಿಪೋದಲ್ಲಿ ಲಸಿಕಾ ಕ್ಯಾಂಪ್ ಮಾಡಿ. ಲಸಿಕಾ ತಂಡಗಳಿಗೆ ಪೊಲೀಸರು ಭದ್ರತೆ ಒದಗಿಸಲು ಸೂಚಿಸಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಸೆ.14ವರೆಗೆ ಗಂಗಾವತಿ ತಾಲೂಕಿನಲ್ಲಿ ಶೇ.58 ಜನರಿಗೆ ಮೊದಲ ಡೋಸ್, ಶೇ.84 ಜನರಿಗೆ ಎರಡನೇ ಡೋಸ್, ಕೊಪ್ಪಳದಲ್ಲಿ ಶೇ.76 ಜನರಿಗೆ ಮೊದಲ, ಶೇ.86 ಜನರಿಗೆ ಎರಡನೇ, ಕುಷ್ಟಗಿಯಲ್ಲಿ ಶೇ. 62 ಜನತೆಗೆ ಮೊದಲ, ಶೇ.91 ಜನರಿಗೆ ಎರಡನೇ ಡೋಸ್, ಯಲಬುರ್ಗಾದಲ್ಲಿ ಶೇ. 66 ಸಾರ್ವಜನಿಕರಿಗೆ ಮೊದಲ ಹಾಗೂ ಶೇ.94 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲಾದ್ಯಂತ 6,61,603 ಜನರಿಗೆ ಮೊದಲ ಡೋಸ್, 2,26,089 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಸೆ.17ರಂದು ಬೃಹತ್ ಲಸಿಕಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts